UDUPI ; ಮಲ್ಪೆ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರ ರಕ್ಷಣೆ
Monday, September 12, 2022
ಮಲ್ಪೆ ಬೀಚ್ ಸಮುದ್ರದಲ್ಲಿ ಈಜಾಡಲು ಹೋಗಿ ಸಮುದ್ರಪಾಲಾಗುತ್ತಿದ್ದ ಇಬ್ಬರು ಪ್ರವಾಸಿಗರನ್ನು ಜೀವ ರಕ್ಷಕ ತಂಡದವರು ರಕ್ಷಿಸಿದ ಘಟನೆ ಮಲ್ಪೆ ಬೀಚ್‌ನಲ್ಲಿ ನಡೆದಿದೆ.
ಸಕಲೇಶಪುರದ ಮೂಲದ ಅವಿನಾಶ್ (26) ಮತ್ತು ಸಾಗರ್ (27) ಮುಖ್ಯ ಬೀಚ್‌ನಿಂದ ತುಸು ದೂರದಲ್ಲಿ ನೀರಿಗಿಳಿದು ಈಜಾಡ ತೊಡಗಿದ್ದರು.
ಅಬ್ಬರದ ಅಲೆಗಳು ಅವರಿಬ್ಬರನ್ನು ಕೊಚ್ಚಿಕೊಂಡು ಹೋದದನ್ನು ಕಂಡ ಬೀಚ್‌ನ ಜೀವರಕ್ಷಕರು, ಮುಳುಗುತ್ತಿದ್ದ ಇಬ್ಬರನ್ನೂ ರಕ್ಷಿಸಿದ್ದಾರೆ. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಲ್ಪೆ ಸಮುದ್ರ ತೀರದಲ್ಲಿ ನೆಟ್ ಆಳವಡಿಸದಿದ್ದುರಿಂದ ಆ ಭಾಗದಲ್ಲಿ ಅವರು ಜೀವರಕ್ಷಕರ ಎಚ್ಚರಿಕೆಯನ್ನು ಧಿಕ್ಕರಿಸಿ ನೀರಿಗಿಳಿದಿದ್ದರು. ಇಬ್ಬರೂ ಮದ್ಯ ಸೇವನೆ ಮಾಡಿದ್ದರು ಅಂತ ಜೀವರಕ್ಷಕರು ತಿಳಿಸಿದ್ದಾರೆ.