UDUPI ; ಬೆಂಗಳೂರಿನ ಅಪಘಾತ : ಕುಂದಾಪುರದ ಮಹಿಳೆ ಸಾವು
Monday, September 12, 2022
ಸ್ಕೂಟಿ ಹಾಗೂ ಟ್ಯಾಂಕರ್ ನಡುವೆ ಬೆಂಗಳೂರಿನಲ್ಲಿ ನಡೆದ ಅಪಘಾತದಲ್ಲಿ ಉಡುಪಿಯ ಬೈಂದೂರು ಸಮೀಪದ ಹೊಸ್ಕೋಟೆಯ ಮಹಿಳೆ ಸಾವನ್ನಪ್ಪಿದ ಘಟನೆ ನಡೆದಿದೆ. ಪ್ರೇಮ ಪೂಜಾರಿ(35) ಸಾವನ್ನಪ್ಪಿದವರು.
ಎರಡು ವರ್ಷದ ಹಿಂದಷ್ಟೇ ಪ್ರೇಮ ಪೂಜಾರಿ ಬೆಂಗಳೂರಿಗೆ ಉದ್ಯೋಗಕ್ಕಾಗಿ ಹೋಗಿ, ಅಂಚೆ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮಧ್ಯಾಹ್ನದ ವೇಳೆ ಪತಿಗೆ ಸಹಕರಿಸಲೆಂದು ಹೊರಗೆ ಹೋಗಿದ್ದರೆನ್ನಲಾಗಿದೆ. ಯಲಹಂಕದಲ್ಲಿ ಅಪಘಾತ ಸಂಭವಿಸಿದ್ದು ಪ್ರೇಮ ಪೂಜಾರಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೃತ ದೇಹವನ್ನು ಬೊಳ್ಳುಗುಡ್ಡೆಯ ಸ್ವಗೃಹಕ್ಕೆ ತರಲಾಗಿದ್ದು, ಪ್ರೇಮ ಪೂಜಾರಿಯವರು ಪತಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.