
ಹೆರಿಗೆಯ ನಂತ್ರ ನಟಿ ಪ್ರಣಿತಾ, ಫಿಟ್ ನೆಸ್ ಹೇಗಿದೆ ಗೊತ್ತಾ..!
Monday, September 12, 2022
ಕನ್ನಡದ ಪೊರ್ಕಿ ಸೇರಿದಂತೆ ಸ್ಯಾಂಡಲ್‌ವುಡ್‌ನ ಸ್ಟಾರ್ ನಟರ ಸಿನಿಮಾಗಳಲ್ಲಿ ಕಾಣಿಕೊಂಡಿದ್ದ, ಬಹುಭಾಷಾ ನಟಿ ಪ್ರಣಿತಾ ಸುಭಾಷ್ ಸದ್ಯ ತಮ್ಮ ಮುದ್ದು ಮಗಳ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಮಗಳ ಪಾಲನೆ ಜೊತೆಗೆ, ಫಿಟ್ ನೆಸ್ ಕಡೆಗೂ ಅಷ್ಟೇ ಗಮನ ಕೊಟ್ಟಿದ್ದಾರೆ. ಹೆರಿಗೆಯ ನಂತರ ಪ್ರಣಿತಾ ಮತ್ತಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡು, ಅಭಿಮಾನಿಗಳಿಂದ ವಾವ್ ಅನ್ನಿಸಿಕೊಂಡಿದ್ದಾರೆ.
ಪ್ರಣಿತಾ ಬಳಿಕ ಬಹುಭಾಷಾ ನಾಯಕಿಯಾಗಿ ಛಾಪೂ ಮೂಡಿಸಿ, ಸಿನಿಮಾ ರಂಗದಲ್ಲಿ, ಡಿಮ್ಯಾಂಡ್ ಇರುವಾಗಲೇ ಕಳೆದ ವರ್ಷ ಉದ್ಯಮಿ ನಿತಿನ್ ಜೊತೆ ಸಪ್ತಪತಿ ತುಳಿದಿದ್ದರು. ಸದ್ಯ ಮುದ್ದು ಮಗಳು ಅರ್ನಾ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿದ್ರೂ, ತಮ್ಮ ಫಿಟ್ ನೆಸ್ ಕಡೆ ವಿಶೇಷ ಆಸಕ್ತಿ ವಹಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬೋಲ್ಡ್ ಪೋಟೋ ವಿಡಿಯೋ ಹಂಚಿಕೊಂಡಿದ್ದಾರೆ.