-->

UDUPI : ತರಕಾರಿ ವ್ಯಾಪಾರಿಗಳ ಹೊಡೆದಾಟ : ದೂರು, ಪ್ರತಿದೂರು ದಾಖಲು

UDUPI : ತರಕಾರಿ ವ್ಯಾಪಾರಿಗಳ ಹೊಡೆದಾಟ : ದೂರು, ಪ್ರತಿದೂರು ದಾಖಲು

ತರಕಾರಿ ವ್ಯಾಪಾರಿಗಳ ನಡುವೆ ವ್ಯಾಪಾರದ ವಿಚಾರದಲ್ಲಿ ಜಗಳವಾಗಿ ಪರಸ್ಪರ ಹೊಡೆದಾಟ ನಡೆದಿರುವ ಘಟನೆ  ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಜಗೋಳಿ ಎಂಬಲ್ಲಿ ನಡೆದಿದೆ. 
ಜಿನೇಶ್ ಎಂಬವರು ಬಜೆಗೋಳಿ ಮಾರ್ಕೆಟ್ ಪ್ರಾಂಗಣದಲ್ಲಿ ತರಕಾರಿ ಅಂಗಡಿಯಲ್ಲಿ ಇಟ್ಟುಕೊಂಡಿದ್ದರು.  ಪಕ್ಕದಲ್ಲಿ ತರಕಾರಿ ಅಂಗಡಿ ಇಟ್ಟುಕೊಂಡಿದ್ದ ಪ್ರಸನ್ನ ಎಂಬವರು  ಜಿನೇಶ್ ಅಂಗಡಿಗೆ ಬಂದು ಎರಡು ಕಟ್ಟು ಸ್ಪಿಂಗ್ ಆನಿಯನ್ ಬೇಕೆಂದಾಗ,  40 ರೂಪಾಯಿ ದರ ಅಂತ ಜಿನೇಶ ಹೇಳಿದಾಗ,   ನಿನ್ನ ಸ್ಟಿಂಗ್ ಆನಿಯನ್ ಯಾರಿಗೆ ಬೇಕು ಎಂದು ಏಕಾಎಕಿ ಸಿಟ್ಟುಗೊಂಡ ಪ್ರಸನ್ನ, ಸ್ಪಿಂಗ್ ಆನಿಯನ್ ಅನ್ನು ಎಸೆದು ಪಕ್ಕದಲ್ಲಿದ್ದ ಚೂರಿಯಲ್ಲಿ ಜಿನೇಶ್ ಅವರಿಗೆ ಇರಿಯಲು ಮುಂದಾದರು. ಕೂಡಲೇ ಜಿನೇಶ್, ತಪ್ಪಿಸಿಕೊಂಡ ಪರಿಣಾಮವಾಗಿ ಬೆನ್ನಿಗೆ ಚೂರಿತ ತಗುಲಿ ಗಾಯವಾಗಿದೆ.  ಪ್ರಸನ್ನ ಬೆದರಿಕೆ ಹಾಕಿದ್ದಾರೆಂದು ಜಿನೇಶ್ ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. 

ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಪ್ರಸನ್ನ ಅವರ ಪತ್ನಿ ಪ್ರತಿಮಾ ಜಿನೇಶ್ ವಿರುದ್ಧ, ಜಿನೇಶ್ ಏಕಾಎಕಿ ತನ್ನ ಗಂಡ ಪ್ರಸನ್ನವರನ್ನು ನೆಲಕ್ಕೆ ದೂಡಿ ಕುತ್ತಿಗೆ ಹಿಡಿದು ತಲೆ,ಎದೆ ಹಾಗೂ ಮುಖಕ್ಕೆ ಹಲ್ಲೆ ನಡೆಸಿದಾಗ ಇದನ್ನು ತಡೆಯಲು ಹೋದ ತನಗೂ ದೂಡಿ ಜೀವ ಬೆದರಿಕೆಯೊಡ್ಡಿದ್ದಾನೆಂದು ಪ್ರತಿಮಾ  ಕಾರ್ಕಳ ಗ್ರಾಮಾಂತರ ಠಾಣೆಗೆ ಪ್ರತಿ ದೂರು ನೀಡಿದ್ದಾರೆ. ಘಟನೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99