
UDUPI : ಚಿನ್ನ ಪಾಲೀಶ್ ಮಾಡುವುದಾಗಿ ಹೇಳಿ ಮೋಸ ಮಾಡಲು ಯತ್ನ ; ಇಬ್ಬರ ಬಂಧನ
ಉಡುಪಿಯ ಶಾಂತಿಬೆಟ್ಟುವಿನಲ್ಲಿ ಚಿನ್ನ ಪಾಲೀಶ್ ಮಾಡುವುದಾಗಿ ಹೇಳಿ, ಮನರಯವರನ್ನು ನಂಬಿಸಿ ಮೋಸ ಮಾಡಲು ಯತ್ನಿಸುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಹಿರಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಬಿಹಾರ ಮೂಲದ ಆನಂದ ಕಿಶೋರ್ ಮೆಹ್ರಾ (34) ಹಾಗೂ ಮನೋಜ್ ಯಾದವ್ (38) ಬಂಧಿತರು.
ಹಿರಿಯಡ್ಕ ಸಮೀಪದ ಶಾಂತಿಬೆಟ್ಟುವಿನ ಕಿಶೋರ್ ಅವರ ಮನೆಗೆ ಬಂದು, ಚಿನ್ನಕ್ಕೆ ಪಾಲಿಶ್ ಮಾಡಿಕೊಡುವುದಾಗಿ ಹೇಳಿದ್ದರು. ಇವರ ಬಗ್ಗೆ ಸಂಶಯಗೊಂಡ ಮನೋಜ್, ಹಿರಿಯಡ್ಕ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.
ಇದನ್ನು ತಿಳಿದ ಇಬ್ಬರೂ ಸಿಟ್ಟುಗೊಂಡ ಕಿಶೋರ್ ಅವರಿಗೆ ಅವಾಚ್ಯ ಶಬ್ದ ಗಳಿಂದ ಬೈದು ಅಲ್ಲಿಂದ ಹೋಗಲು ಪ್ರಯತ್ನಿಸಿದ್ದು, ಕೂಡಲೇ ಅಲ್ಲೇ ಇದ್ದ ಪರಿಚಯದವರನ್ನು ಕರೆಸಿ ಅವರನ್ನು ಹಿಡಿದು, ಸ್ಥಳಕ್ಕೆ ಆಗಮಿಸಿದ ಹಿರಿಯಡ್ಕ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.