UDUPI : ಮೋದಿ ಉಡುಗೊರೆಗೆ ಉಡುಪಿಯಲ್ಲಿ ದಿನನಿತ್ಯ ಪೂಜೆ..! ಮಂಗಳಾರತಿ..!
Monday, September 19, 2022
ಪ್ರಧಾನಿ ಮೋದಿ ಅವರಿಗೆ ವರ್ಷದಲ್ಲಿ ಸಾವಿರಾರು ಗಿಫ್ಟ್ ಬರುತ್ತೆ. ಇಂತಹ ಸ್ಮರಣೆಕೆಗಳನ್ನು ರಾಶಿ ಹಾಕಿಕೊಳ್ಳದೇ,
ಅವುಗಳನ್ನು ಹರಾಜು ಹಾಕಿ, ಅವುಗಳಿಂದ ಸಂಗ್ರಹವಾದ ಹಣವನ್ನು ನಮಾಮಿ ಗಂಗಾ ಯೋಜನೆಗೆ ಬಳಸಿಕೊಳ್ಳತ್ತಾರೆ.
ಹೀಗೆ ಹರಾಜಿನಲ್ಲಿ ಪ್ರಧಾನಿಗೆ ಸಿಕ್ಕ ಸ್ಮರಣಿಕೆಯೊಂದು, ಉಡುಪಿಯಲ್ಲಿ ಪ್ರತಿನಿತ್ಯ ಪೂಜಿಸಲ್ಪಡುತ್ತಿದೆ. ಹೌದು, ಮೋದಿ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿ ಕಾರ್ತೀಕೆಯ ದೇವರ ಫೋಟೋಯೊಂದನ್ನು ತಮಿಳುನಾಡು ಮೂಲದವರು ಉಡುಗೊರೆ ರೂಪದಲ್ಲಿ ನೀಡಿದ್ದರು. ಈ ಫೋಟೋವನ್ನು ಉಡುಪಿ ಅಂಬಲಪಾಡಿಯ ನಿವಾಸಿ, ಲೆಕ್ಕಪರಿಶೋಧಕ ಕೆ.ರಂಗನಾಥ್ ಆಚಾರ್ ಹರಾಜಿನಲ್ಲಿ ಖರೀದಿಸಿ, ತಮ್ಮ ಮನೆಯ ದೇವರ ಕೋಣೆಯಲ್ಲಿಟ್ಟು ಪೂಜಿಸುತ್ತಿದ್ದಾರೆ.
2021 ರಲ್ಲಿ ಕೇಂದ್ರ ಸರಕಾರ ಪ್ರಧಾನಿಯವರ ಉಡುಗೊರೆಯ ಹರಾಜಿನಿಂದ ಬಂದ ಹಣವನ್ನು ನಮಾಮಿ ಗಂಗಾ ಯೋಜನೆಗೆ ಬಳಸುತ್ತೇವೆ ಎಂದು ಘೋಷಿಸಿದ್ದರು.
ವೆಬ್ ಸೈಟ್ ನಲ್ಲಿ ಬಿಡ್ ಮಾಡಿ ಆನ್ ಲೈನ್ ನಲ್ಲಿ ಹಣ ಕಳುಹಿಸಬೇಕು. ಉಡುಪಿಯಲ್ಲಿರುವ ಈ ಪೋಟೋಗೆ ೧೦೦೦ ಹಣ ಬರೆದಿತ್ತು. ಕೆ.ರಂಗನಾಥ್ ಆಚಾರ್ ಬಿಡ್ ಮಾಡಿ, 8 ಸಾವಿರಕ್ಕೆ ತೆಗೆದುಕೊಂಡಿದ್ದರು. ಹರಾಜು ಪ್ರಕ್ರಿಯೆಯ ದಿನಾಂಕ ಮುಗಿದ ಮೂರು ವಾರಗಳ ನಂತರ ಕಾರ್ತಿಕೇಯನ ಫೋಟೋ ಜಾಗರೂಕವಾಗಿ, ಸ್ಪೀಡ್ ಪೋಸ್ಟ್ ನಲ್ಲಿ ದೆಹಲಿಯಿಂದ ಉಡುಪಿಗೆ ಬಂದಿತ್ತು.