
UDUPI : ಉಡುಪಿಯಲ್ಲಿ ಮೀನಿನ ಸುಗ್ಗಿ : ಕಡಲ ದಡದಲ್ಲಿ ರಾಶಿ ರಾಶಿ ಬೂತಾಯಿ..!
ಉಡುಪಿಯ ತೊಟ್ಟಂನ ಕಡಲ ತೀರದಲ್ಲಿ ರಾಶಿ ರಾಶಿ ಮೀನುಗಳು ದಡಕ್ಕೆ ಅಪ್ಪಳಿಸಿ, ಮತ್ಸ್ಯ ಪ್ರೀಯರಿಗೆ ಮೀನಿನ ಸುಗ್ಗಿಯಾಗಿದೆ. ತೊಟ್ಟಂ ಕಡಲ ತೀರದಲ್ಲಿ ರಾಶಿ ರಾಶಿ ಬೂತಾಯಿ ಮೀನುಗಳು ದಡಕ್ಕೆ ಬಂದು ಬಿದ್ದ ಸುದ್ದಿ ಸ್ಥಳೀಯರಿಗೆ ಸಿಕ್ಕಿದೇ ತಡ, ಕಡಲ ತೀರದ ನಿವಾಸಿಗಳು ಓಡೋಡಿ ಬಂದು, ಮೀನು ಸಂಗ್ರಹಿಸಲು ಮುಗಿ ಬಿದ್ದರು.
ಪ್ಲಾಸ್ಟಿಕ್ ಕವರ್, ಪಾತ್ರೆ, ಗೋಣಿ ಚೀಲಗಳಲ್ಲಿ ಮೀನುಗಳನ್ನು ಸಂಗ್ರಹಿಸಿ ಮನೆಗೆ ಕೊಂಡೊಯ್ಯದ್ದರು. ಸದ್ಯ ಕಡಲಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೂತಾಯಿ ಮೀನುಗಳು ಸಿಗುತ್ತಿದೆ.
ಸಮುದ್ರದಲ್ಲಿ ಗುಂಪು ಗುಂಪಾಗಿ ಸಂಚಾರ ಮಾಡುವ ಬೂತಾಯಿ ಮೀನುಗಳು, ಕೆಲವೊಮ್ಮೆ ದಡದ ತೀರದಲ್ಲಿ ಬಂದಾಗ ಸಮುದ್ರದ ಬೃಹತ್ ಗಾತ್ರದ ಅಲೆಗಳಿಗೆ ಸಿಕ್ಕಿ ದಡಕ್ಕೆ ಬಂದು ಅಪ್ಪಳಿಸುತ್ತದೆ. ಹೀಗೆ ಅಪ್ಪಳಿಸಿದ ಮೀನುಗಳು ರಾಶಿ ರಾಶಿಯಾಗಿ ದಡಕ್ಕೆ ಬಂದು ಬಿದ್ದಾಗ ಸ್ಥಳೀಯ ನಿವಾಸಿಗಳಿಗೆ ಮೀನಿನ ಸುಗ್ಗಿ, ಭರ್ಜರಿ ಮೀನೂಟ..