UDUPI : ದ್ವಿಚಕ್ರ ವಾಹನದಲ್ಲಿ ಅಕ್ರಮ ಮದ್ಯ ಮಾರಾಟ : ಓರ್ವ ವಶಕ್ಕೆ
Monday, September 19, 2022
ದ್ವಿಚಕ್ರ ವಾಹನದಲ್ಲಿ ಅಕ್ರಮ ಮದ್ಯ ಮಾರಾಟ ಜಾಲವನ್ನು
ಉಡುಪಿ ಜಿಲ್ಲೆಯ ಕಾರ್ಕಳ ನಗರ ಠಾಣಾ ಪೊಲೀಸರು ಪತ್ತೆ ಹಚ್ಚಿ, ಓರ್ವನನ್ನು ವಶಕ್ಕೆ ಪಡೆದಿದ್ದಾರೆ.
ಸಂತೋಷ್ ಪೂಜಾರಿ ಪ್ರಕರಣದ ಆರೋಪಿತ. ದ್ವಿಚಕ್ರ ವಾಹನದಲ್ಲಿ ಮದ್ಯ ತುಂಬಿದ ಪ್ಲಾಸ್ಟಿಕ್ ಗೋಣಿ ತುಂಬಿಕೊಂಡು ಕಾರ್ಕಳ ಬಸ್‌ನಿಲ್ದಾಣದಿಂದ ತೆಳ್ಳಾರು ಕಡೆಗೆ ಕೊಂಡು ಹೋಗುತ್ತಿದ್ದ. ಈ ವೇಳೆ ಈತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪರವಾನಿಗೆ ಪಡೆಯದೇ, ಅಕ್ರಮವಾಗಿ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಮಾರಾಟ ಮಾಡಿತ್ತಿದ್ದ ಎನ್ನಲಾಗಿದೆ. ಸಂತೋಷ್ ಪೂಜಾರಿಯಿಂದ ರೂ. 31,615 ಮೌಲ್ಯದ ಮದ್ಯ ವಶಕ್ಕೆ ಪಡೆಯಲಾಗಿದೆ.