UDUPI : ಪ್ರಿಯತಮೆಯ ಜೊತೆ ಪ್ರೀತಿ ಉಳಿಸಿಕೊಳ್ಳಲು ಸಾವಿನ ನಾಟಕವಾಡಿದ ಯುವಕ
Wednesday, September 28, 2022
ಕೆಲ ದಿನಗಳ ಹಿಂದೆ ಉಡುಪಿ ಮಲ್ಪೆ ಪಡುಕರೆ ಸೇತುವೆ ಬಳಿ ಬೈಕ್, ಚಪ್ಪಲಿ ಇರಿಸಿ, ನೀರಿಗೆ ಬಿದ್ದುದಾಗಿ ಕಣ್ಮರೆಯಾದ ನಾಟಕವಾಡಿದ ದಾವಣಗೆರೆಯ ಶಿವಪ್ಪ ನಾಯ್ಕ ತನ್ನೂರಿನಲ್ಲೊಯೇ ಪತ್ತೆಯಾಗಿದ್ದಾನೆ.
ಸೆಪ್ಟೆಂಬರ್ 23ರಂದು ಶಿವಪ್ಪ ನಾಯ್ಕನ ಬೈಕ್ ಮತ್ತು ಚಪ್ಪಲಿಯು ಸೇತುವೆಯ ತಡೆಗೋಡೆ ಬಳಿ ಪತ್ತೆಯಾದ ಹಿನ್ನಲೆಯಲ್ಲಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಬಳಿಕ ಮುಳುಗು ತಜ್ಞ ಈಶ್ವರ ಮಲ್ಪೆ, ಪೊಲೀಸ್ ರ ಕೋರಿಕೆಯ ಮೇರೆಗೆ ಹೊಳೆಯಲ್ಲಿ ಹುಡುಕಾಟ ಮಾಡಿದ್ದರು ಶಿವಪ್ಪ ನಾಯ್ಕ್ ನ ದೇಹ ಪತ್ತೆಯಾಗಿರಲಿಲ್ಲ. ಹೀಗಾಗಿ ಅನುಮಾನಗೊಂಡ ಪೊಲೀಸ್ ರು ತನಿಖೆ ಮುಂದುವರಿಸಿ, ಆತನ ಮೊಬೈಲ್ ಆನ್ ಮಾಡಿದಾಗ ಕುಂಜಿಬೆಟ್ಟಿನ ಬ್ಯಾಂಕಿನಿಂದ 24 ಸಾವಿರ ರೂ. ಡ್ರಾ ಮಾಡಿದ ಮಾಹಿತಿ ಪತ್ತೆಯಾಗಿದೆ. ಈ ಮಾಹಿತಿ ಆಧರಿಸಿ ತನಿಖೆ ನಡೆಸಿದ ಪೊಲೀಸ್ ರಿಗೆ ಶಿವಪ್ಪ ನಾಯ್ಕ ದಾವಣಗೆರೆಯಲ್ಲಿರುವ ಪತ್ತೆಯಾಗಿದೆ. ಸೋಮವಾರ ಮಲ್ಪೆ ಪೊಲೀಸ್ ಠಾಣೆಗೆ ಕರೆ ತಂದು ವಿಚಾರಿಸಿದಾಗ, ಕಟ್ಟಿಕೊಂಡವನ್ನು ಬಿಟ್ಟು ಇನ್ನೋರ್ವಳ ಜೊತೆ ಇರುವ ಲವ್ ಸ್ಟೋರಿ ಬೆಳಕಿಗೆ ಬಂದಿದೆ. 6 ತಿಂಗಳ ಹಿಂದೆ ದಾವಣಗೆರೆಯ ಉತ್ಕಟಿ ತಾಂಡದ ಆಶಾ ಅವರನ್ನು ಪ್ರೀತಿಸಿ ಮದುವೆಯಾಗಿ ಮಲ್ಪೆ ಕೊಳದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಮೀನು ಹೋರುವ ಕೆಲಸ ಮಾಡಿಕೊಂಡಿದ್ದು. ಅದೇ ಬಂದರಿನಲ್ಲಿ ಕೆಲಸ ಮಾಡಿಕೊಂಡಿದ್ದ ಹೊಸಪೇಟೆ ಹರಪ್ಪನಹಳ್ಳಿ ಮೂಲದ ಕಮಲಿಯೊಂದಿಗೆ ಸಂಪರ್ಕ ಬೆಳೆಸಿಕೊಂಡಿದ್ದ. ಇದೇ ವಿಚಾರದಲ್ಲಿ ಗಂಡ ಹೆಂಡತಿಯೊಂದಿಗೆ ವೈಮನಸ್ಸು ಹೊಂದಿ ಜಗಳಕ್ಕೂ ಕಾರಣವಾಗಿತ್ತು. ಇದೇ ವಿಚಾರವಾಗಿ ಸಾವಿನ ನಾಟಕವಾಡಲು ಪ್ಲಾನ್ ಮಾಡಿದ ಶಿವಪ್ಪ ನಾಯ್ಕ್ ಬೈಕ್ ಅಪಘಾತವಾಗಿ ಸೇತುವೆಯಿಂದ ಹೊಳೆಗೆ ಬಿದ್ದು ನಾಪತ್ತೆಯಾಗಿರುವ ಬಗ್ಗೆ ಬಿಂಬಿಸಿದ್ದಾನೆ. ಬೈಕ್ ನ್ನು ಸೇತುವೆಯ ತಡೆಗೋಡೆ ಢಿಕ್ಕಿ ಹೊಡೆಸಿ, ಕೋಳಿಯನ್ನು ಕೊಯ್ದು ಅದರ ರಕ್ತವನ್ನು ರಸ್ತೆ ಮೇಲೆ ಹರಿಸಿ ಅಪಘಾತವಾಗಿರುವ ಚಿತ್ರಣ ಮೂಡಿಸಿದ್ದಾನೆ. ಚಪ್ಪಲಿ ಮತ್ತು ಮೊಬೈಲ್ ಸೇತುವೆ ಬಳಿ ಬಿಟ್ಟು, ಉಡುಪಿ ಲಾಡ್ಜ್ ನಲ್ಲಿ ಒಂದು ರಾತ್ರಿ ತಂಗಿದ್ದಾನೆ, ಬಳಿಕ ದಾವಣಗೆರೆಯ ಸಂಬಂಧಿಕರ ಮನೆಗೆ ತೆರಳಿರುವುದಾಗಿ ಶಿವಪ್ಪ ನಾಯ್ಕ್ ಒಪ್ಪಿಕೊಂಡಿದ್ದಾನೆ. ತನಿಖೆ ನಡೆಸಿದ ಪೊಲೀಸರು ಶಿವಪ್ಪ ನಾಯ್ಕ್ ನಿಗೆ ಬುದ್ಧಿ ಹೇಳಿ, ಹೆಂಡತಿ ಜತೆ ಸಂಸಾರ ನಡೆಸುವಂತೆ ಹೇಳಿ ಕಳುಹಿಸಿಕೊಟ್ಟಿದ್ದಾರೆ.