ಮಕ್ಕಳಿಂದಲೂ ಅವಹೇಳನಕಾರಿ ಘೋಷಣೆ ಹಾಕಿಸಿತ್ತು – PFI ನಿಷೇಧವನ್ನು ಸ್ವಾಗತಿಸಿದ MUSLIM LEAGUE
Wednesday, September 28, 2022
ತಿರುವನಂತಪುರಂ: PFI ನಿಷೇಧ ಮಾಡಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್(IUML) ಸ್ವಾಗತಿಸಿ ಹೇಳಿಕೆ ನೀಡಿದೆ.
ಕೋಝಿಕ್ಕೋಡ್‌ನಲ್ಲಿ ಮುಸ್ಲಿಂ ಲೀಗ್‌ನ ಹಿರಿಯ ಮುಖಂಡ ಎಂ.ಕೆ.ಮುನೀರ್ ಮಾತನಾಡಿ ಈ ಸಂಘಟನೆಯೂ ಕುರಾನ್ ಅನ್ನು ತಪ್ಪಾಗಿ ಅರ್ಥೈಸಿದೆ ಮತ್ತು ಹಿಂಸಾಚಾರದ ಮಾರ್ಗವನ್ನು ಅಳವಡಿಸಿಕೊಳ್ಳಲು ಸಮುದಾಯದವರನ್ನು ಮನವೊಲಿಸುತ್ತಿತ್ತು ಎಂದು ಹೇಳಿದ್ದಾರೆ
PFI ಯುವ ಪೀಳಿಗೆಯನ್ನು ದಾರಿತಪ್ಪಿಸಲು ಪ್ರಯತ್ನಿಸಿದ್ದು ಮಾತ್ರವಲ್ಲದೆ ಸಮಾಜದಲ್ಲಿ ಒಡಕು ಮತ್ತು ದ್ವೇಷವನ್ನು ಸೃಷ್ಟಿಸಿತ್ತು.ರಾಜ್ಯದಲ್ಲಿರುವ ಎಲ್ಲಾ ಇಸ್ಲಾಮಿಕ್ ವಿದ್ವಾಂಸರು ಉಗ್ರಗಾಮಿ ಸಿದ್ಧಾಂತಗಳನ್ನು ಬಲವಾಗಿ ಖಂಡಿಸಿದ್ದಾರೆ. ಆದರೆ pfi
ಸಣ್ಣ ಮಕ್ಕಳ ಬಾಯಲ್ಲೂ ಅವಹೇಳನಕಾರಿ ಘೋಷಣೆಗಳನ್ನು ಕೂಗುವಂತೆ ಮಾಡಿತ್ತು ಎಂದರು.
ಆರ್‌ಎಸ್‌ಎಸ್ ಮತ್ತು ಪಿಎಫ್‌ಐ-ಎಸ್‌ಡಿಪಿಐ ಎರಡರ ಕಾರ್ಯಗಳನ್ನು ಮುಸ್ಲಿಮ್ ಲೀಗ್ ಯಾವಾಗಲೂ ವಿರೋಧಿಸುತ್ತದೆ , ಆಯಾ ಸಮುದಾಯಗಳು ಅಂತಹ ಸಂಘಟನೆಗಳ ಕೋಮು ಸಿದ್ಧಾಂತಗಳನ್ನು ತಿರಸ್ಕರಿಸಬೇಕು ಎಂದು ಅವರು ಹೇಳಿದರು.