SDPIಗೂ ಬಿಜೆಪಿಗೂ ಇರುವುದು "ಯಾವ ಜನ್ಮದ ಮೈತ್ರಿ"? - ಬಿಜೆಪಿಗೆ ಪ್ರಶ್ನೆ
Wednesday, September 28, 2022
ಬೆಂಗಳೂರು: PFI ನ್ನು ನಿಷೇಧ ಮಾಡಿದ ಕೇಂದ್ರ ಸರಕಾರ SDPI ಬಗ್ಗೆ ಮೌನವಾಗಿರುವ ಬಗ್ಗೆ ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮೂಲಕ ಪ್ರಶ್ನಿಸಿದೆ.
ಕರ್ನಾಟಕ ಕಾಂಗ್ರೆಸ್ ಟ್ವೀಟ್ ನಲ್ಲಿ ಹೇಳಿದ್ದು ಹೀಗೆ...PFI ಹಾಗೂ SDPI ಒಂದೇ ನಾಣ್ಯದ ಎರಡು ಮುಖಗಳಂತಿದ್ದವು, ಚುನಾವಣಾ ರಾಜಕೀಯದಲ್ಲಿ ಹೆಚ್ಚು ಸಕ್ರಿಯವಾಗಿರುವ SDPI ಸಂಘಟನೆಯ ಬಗ್ಗೆ ಚಕಾರ ಎತ್ತದಿರುವುದೇಕೆ ಬಿಜೆಪಿ ಸರ್ಕಾರ.SDPIಗೂ ಬಿಜೆಪಿಗೂ ಇರುವುದು "ಯಾವ ಜನ್ಮದ ಮೈತ್ರಿ"?PFI ಜೊತೆಗೆ ಇದ್ದ ಬಿಜೆಪಿಯ ಹೊಂದಾಣಿಕೆ ಎಂತದ್ದು?ಈ ಆಯಾಮದಲ್ಲಿ NIA ತನಿಖೆ ನಡೆಸಬೇಕಿದೆ.
PFI ಹಾಗೂ SDPI ಒಂದೇ ನಾಣ್ಯದ ಎರಡು ಮುಖಗಳಂತಿದ್ದವು, ಚುನಾವಣಾ ರಾಜಕೀಯದಲ್ಲಿ ಹೆಚ್ಚು ಸಕ್ರಿಯವಾಗಿರುವ SDPI ಸಂಘಟನೆಯ ಬಗ್ಗೆ ಚಕಾರ ಎತ್ತದಿರುವುದೇಕೆ ಬಿಜೆಪಿ ಸರ್ಕಾರ.
— Karnataka Congress (@INCKarnataka) September 28, 2022
SDPIಗೂ ಬಿಜೆಪಿಗೂ ಇರುವುದು "ಯಾವ ಜನ್ಮದ ಮೈತ್ರಿ"?
PFI ಜೊತೆಗೆ ಇದ್ದ ಬಿಜೆಪಿಯ ಹೊಂದಾಣಿಕೆ ಎಂತದ್ದು?
ಈ ಆಯಾಮದಲ್ಲಿ NIA ತನಿಖೆ ನಡೆಸಬೇಕಿದೆ.