UDUPI : ಓಟ ನಿಲ್ಲಿಸಿದ ಕಂಬಳ ಕ್ಷೇತ್ರದ ಸಾಧಕ ತೆಳ್ಳಾರು ಮೋಡೆ..!
Sunday, September 18, 2022
ಕಂಬಳ ಕ್ಷೇತ್ರದಲ್ಲಿ ವೇಗದ ಓಟಕ್ಕೆ ಹೆಸರಾದ, ಉಡುಪಿ ಕಾರ್ಕಳದ ತೆಳ್ಳಾರು ನೇರೋಳ್ಳ ಪಲ್ಕೆ ಬರ್ಕೆ ಮನೆಯ "ತೆಳ್ಳಾರು ಮೋಡೆ" ಕೋಣವು ಸಾವನ್ಪಿದೆ.
ಕಂಬಳ ಕ್ಷೇತ್ರದಲ್ಲಿ ತೆಳ್ಳಾರು ಮೋಡೆ ಅಂತಾನೆ ಖ್ಯಾತಿ ಪಡೆದ ಈ ಕೋಣ, ಕಳೆದ ಎರಡು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರೂ, ಔಷಧಿಗೆ ಸ್ವಂದಿಸದೇ ಇಂದು ಸಾವನ್ನಪ್ಪಿದೆ. ಹಗ್ಗ ಹಿರಿಯ, ಕಿರಿಯ, ನೇಗಿಲು ಹಿರಿಯ, ಕಿರಿಯ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಗಳಿಸಿರುವ ತೆಳ್ಳಾರು ಮೋಡೆ, ಅಡ್ಡ ಹಲಗೆಯಲ್ಲಿ ಪ್ರತಿ ಬಾರಿಯೂ ಸರಣಿ ಪ್ರಶಸ್ತಿ ತನ್ನದಾಗಿರಿಸುವ ಮೂಲಕ ಕಂಬಳ ಕ್ಷೇತ್ರದಲ್ಲಿ ಜನಪ್ರಿಯವಾಗಿತ್ತು. ಕಾರ್ಕಳ ತೆಳ್ಳಾರು ನೇರೋಳ್ಳ ಪಲ್ಕೆ ಬರ್ಕೆ ಮನೆಯ ಕೋಣ ಇದಾಗಿರುವ ಮೂಲಕ ದುರ್ಗ-ತೆಳ್ಳಾರು ಹೆಸರು ಕಂಬಳ ಕ್ಷೇತ್ರದಲ್ಲಿ ಜನರ ಮನ ಗೆದ್ದಿದೆ. ತೆಳ್ಳಾರು ಮೋಡೆಯನ್ನು ಕೊನೆಯದಾಗಿ ನೋಡಲು ನೂರಾರು ಕಂಬಳ ಅಭಿಮಾನಿಗಳು ತೆಳ್ಳಾರು ನೇರೋಳ್ಳ ಪಲ್ಕೆ ಬರ್ಕೆ ಮನೆಗೆ ಆಗಮಿಸಿದ್ದರು.