-->

UDUPI : ಸಚಿವ ಸುನೀಲ್ ಕುಮಾರ್ ಕ್ಷೇತ್ರದಲ್ಲಿ ಚಿನ್ನದ ರಸ್ತೆ ಉದ್ಘಾಟನೆ

UDUPI : ಸಚಿವ ಸುನೀಲ್ ಕುಮಾರ್ ಕ್ಷೇತ್ರದಲ್ಲಿ ಚಿನ್ನದ ರಸ್ತೆ ಉದ್ಘಾಟನೆ

ಇಂಧನ ಸಚಿವ ಸುನಿಲ್ ಕುಮಾರ್ ಪ್ರತಿನಿಧಿಸುವ ಕಾರ್ಕಳದಲ್ಲಿ ಚಿನ್ನದ ರಸ್ತೆ ಉದ್ಘಾಟನೆಗೊಂಡಿದೆ. ಆದ್ರೆ ಸಚಿವರು ಮಾತ್ರ ಗೈರಾಗಿದ್ರು, ಯಾಕಂದ್ರೆ ಇದು ಅಪಹಾಸ್ಯ ಮಾಡುವ ವಿನೂತನ ಉದ್ಘಾಟನಾ ಕಾರ್ಯಕ್ರಮ ಹೌದು. ಕಾರ್ಕಳ ಪುರಸಭಾ ವ್ಯಾಪ್ತಿಯ ಮೂರು ಮಾರ್ಗದಿಂದ ಹೋಟೆಲ್ ಕಾಮಧೇನು ವರೆಗಿನ ರಸ್ತೆ ಸಂಪೂರ್ಣ ಕೆಟ್ಟು ಹೋಗಿದ್ದು ಇದರ ಪರಿಣಾಮವಾಗಿ ರಸ್ತೆಯಲ್ಲಿ  ಬೃಹತ್ ಹೊಂಡ ಗುಂಡಿಗಳು ನಿರ್ಮಾಣವಾಗಿದೆ. 
ರಸ್ತೆ ಅವ್ಯವಸ್ಥೆ ಖಂಡಿಸಿ ಮತ್ತು ರಸ್ತೆ ದುರಸ್ತಿಗೆ ಆಗ್ರಹಿಸಿ ಇವತ್ತು ಪುರಸಭೆ ಸದಸ್ಯ ಶುಭದ ರಾವ್ ನೇತೃತ್ವದಲ್ಲಿ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ಹಮ್ನಿಕೊಳ್ಳಲಾಯಿತು. ಚೆಂಡೆ ಅಬ್ಬರ,  ಕಂಬಳ ಕೋಣಗಳ ಮೆರವಣಿಗೆ ನಡೆಸಿ, ಸುಡುಮದ್ದು ಪ್ರದರ್ಶನದ ಮೂಲಕ 'ಚಿನ್ನದ ರಸ್ತೆ ಉದ್ಘಾಟನೆ' ಅಣಕು ಪ್ರದರ್ಶನ ಮಾಡಲಾಯಿತು. ಈ ರಸ್ತೆಯಲ್ಲಿ ಅನೇಕ ಅಪಘಾತಗಳಾಗಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಈ ಬಗ್ಗೆ ಸ್ಥಳೀಯ ಆಡಳಿತಕ್ಕೆ ಎಷ್ಟೇ ಮನವಿ ಸಲ್ಲಿಸಿದ್ದರೂ ಪ್ರಯೋಜವಾಗಿರಲಿಲ್ಲ. ಇದಕ್ಕಾಗಿ ಸಾರ್ವಜನಿಕರು ವಿಭಿನ್ನ ಪ್ರತಿಭಟನೆ ಮೊರೆ ಹೋದರು..

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99