25 ಕೋಟಿ ರೂ ಓಣಂ ಬಂಪರ್ ಬಹುಮಾನ ಗೆದ್ದ ರಿಕ್ಷಾ ಚಾಲಕ
Sunday, September 18, 2022
ತಿರುವನಂತಪುರಂ: ಇಂದು ಕೇರಳ ರಾಜ್ಯ ಸರಕಾರದ ಓಣಂ ಬಂಪರ್ ಬಹುಮಾನ ಘೋಷಿಸಲಾಗಿದ್ದು ಅಟೋ ರಿಕ್ಷಾ ಚಾಲಕನಿಗೆ ಅದೃಷ್ಟ ಖುಲಾಯಿಸಿದೆ.
ಓಣಂ ಬಂಪರ್ ಲಾಟರಿಯಲ್ಲಿ ಕೇರಳದ ರಿಕ್ಷಾ ಚಾಲಕನಿಗೆ 25 ಕೋಟಿ ರೂಪಾಯಿಗಳ ಬಂಪರ್ ಬಹುಮಾನ ಬಂದಿದೆ.
ಪ್ರತಿ ಟಿಕೆಟ್ ದರ ರೂ 500 ಆಗಿತ್ತು. ರೂ 500 ಗೆ ಟಿಕೆಟ್ ಖರೀದಿಸಿದ ರಿಕ್ಷಾ ಚಾಲಕನಿಗೆ 25 ಕೋಟಿಯ ಅದೃಷ್ಟ ಬಂದಿದೆ.
ಈ ರಿಕ್ಷಾ ಚಾಲಕ ಅಡುಗೆ ಕೆಲಸಕ್ಕಾಗಿ ಮಲೇಷ್ಯಾಕ್ಕೆ ಹೋಗಲು ಯೋಜಿಸಿದ್ದ. ಇದಕ್ಕಾಗಿ ಆತ ಸಲ್ಲಿಸಿದ್ದ 3 ಲಕ್ಷ ರೂ.ಗಳ ಸಾಲದ ಅರ್ಜಿಯನ್ನೂ ಸಹ ಅಂಗೀಕರಿಸಲಾಗಿತ್ತು. ಇದಾದ ಕೇವಲ ಒಂದು ದಿನದಲ್ಲೇ ಆತನಿಗೆ 25 ಕೋಟಿ ರೂ.ಗಳ ಓಣಂ ಬಂಪರ್ ಲಾಟರಿ ಬಂದಿದೆ.
ಕೇರಳ ರಾಜ್ಯದಲ್ಲಿ ಪ್ರತಿನಿತ್ಯ ಲಾಟರಿ ಡ್ರಾ ನಡೆಯುತ್ತಿದ್ದು ವಿಶೇಷ ದಿನಗಳಂದು ಬಂಪರ್ ಬಹುಮಾನವನ್ನು ನೀಡಲಾಗುತ್ತದೆ. ಇತ್ತೀಚೆಗೆ ನಡೆದ ಓಣಂ ಹಬ್ಬದ ಪ್ರಯುಕ್ತ ಓಣಂ ಬಂಪರ್ ಬಹುಮಾನದ ಲಾಟರಿ ನಡೆಸಲಾಗಿತ್ತು.