UDUPI : ನದಿ ಹಾರಿದ ವಿದ್ಯಾರ್ಥಿಯ ಶವ, ಸಮುದ್ರದಲ್ಲಿ ಪತ್ತೆ
Friday, September 9, 2022
ನೀಟ್ ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶ ಸಿಗದ ಕಾರಣ ಸೇತುವೆಯಿಂದ ನದಿಗೆ ಹಾರಿದ ವಿದ್ಯಾರ್ಥಿ ಸಾಯೀಶ್ ಶೆಟ್ಟಿ ಮೃತದೇಹ ಉಡುಪಿಯ ಬೈಂದೂರಿನ ನಾವುಂದ ಸಮೀಪದ ಅರಬ್ಬೀ ಸಮುದ್ರದಲ್ಲಿ ಪತ್ತೆಯಾಗಿದೆ.
ಸಾಯೀಶ್ ಶೆಟ್ಟಿ, ಯಾವುದೇ ಕೋಚಿಂಗ್ ಇಲ್ಲದೇ ನೀಟ್ ಪರೀಕ್ಷೆ ಬರೆದಿದ್ದ. ಮೆಡಿಕಲ್ ಓದಬೇಕು ಎನ್ನುವ ಆಶೆ ಇತ್ತು. ಆರ್ಥಿಕವಾಗಿ ಕಷ್ಟದಲ್ಲಿದ್ದ ಕುಟುಂಬಕ್ಕೆ ಆಸರೆಯಾಗಬೇಕು ಕನಸು ಹೊಂದಿದ್ದ ಸಾಯೀಶ್‌ಗೆ, ನೀಟ್ ಫಲಿತಾಂಶ ಆತನ ಜೀವನದಲ್ಲಿ ಜಿಗುಪ್ಸೆ ತಂದಿತ್ತು. ಹೀಗಾಗಿ ನಿನ್ನೆ ಹೇರಿಕುದ್ರು ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ನಿನ್ನೆಯಿಡೀ ಸಾಯೀಶ್ ಗಾಗಿ ಶೋಧ ನಡೆದಿತ್ತು. ಕೊನೆಗೂ ನಾವುಂದದಲ್ಲಿ ಮೃತ ದೇಹ ಪತ್ತೆಯಾಗಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.