UDUPI : ಚಿರತೆ ದಾಳಿ : ವೃದ್ದರೊರ್ವರಿಗೆ ಗಂಭೀರ ಗಾಯ
Friday, September 9, 2022
ಚಿರತೆಯೊಂದು ವೃದ್ದರೊಬ್ಬರ ಮೇಲೆ ದಾಳಿ ಮಾಡಿ, ಗಂಭೀರ ಗಾಯಗೊಳಿಸಿದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುಂಡ್ಕೂರು ಎಂಬಲ್ಲಿ ನಡೆದಿದೆ. ಕೃಷ್ಣ ಶೆಟ್ಟಿ ಚಿರತೆ ದಾಳಿಯಿಂದ ಗಂಭೀರ ಗಾಯಗೊಂಡವರು.
ಇಲ್ಲಿನ ಮುಲ್ಲಡ್ಕದ ರಾಜಶ್ರೀ ರೈಸ್ ಮಿಲ್ ಬಳಿಯಳ್ಇ ಕೃಷ್ಣ ಶೆಟ್ಟಿ ನಡೆದುಕೊಂಡು ಹೋಗುತ್ತಿದ್ದಾಗ ಚಿರತೆ ದಾಳಿ ನಡೆಸಿದೆ. ಕೃಷ್ಣ ಶೆಟ್ಟಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದೇ, ಪರಿಸರದಲ್ಲಿ ಇನ್ನೆರಡು ಚಿರತೆಗಳು ಓಡಾಡುತ್ತಿವೆ ಎಂದು ಸ್ಥಳಿಯರು ಆತಂಕ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆಯವರು, ಕಾರ್ಕಳ ಗ್ರಾಮಾಂತರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.