-->

UDUPI : 108 ವರ್ಷದ ಮಾಜಿ ಸೈನಿಕ ನಿಧಾನ

UDUPI : 108 ವರ್ಷದ ಮಾಜಿ ಸೈನಿಕ ನಿಧಾನ

ನಿವೃತ್ತ ಸೈನಿಕ ಉಡುಪಿಯ ಪರ್ಕಳದ ಅಚ್ಯುತ ನಗರ ನಿವಾಸಿ 108 ವರ್ಷದ ಮೈಕಲ್ ಡಿಸೋಜಾ ನಿಧನರಾಗಿದ್ದಾರೆ. ಮದ್ರಾಸು ಸರ್ಕಾರದಲ್ಲಿ ಸೈನ್ಯಕ್ಕೆ ಸೇರಿದ್ದ ಅವರು ಮೆಕಾನಿಕಲ್ ಕಮ್ ಡ್ರೈವರ್ ಆಗಿ ಸೇನೆಯಲ್ಲಿ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 
ಮೈಕಲ್ ಡಿಸೋಜ ಅವರ ತಾಯಿ ಕೂಡ 108 ವರ್ಷ ಕಾಲ ಬದುಕಿದ್ದರು. ಮೂಲತಃ ಮಂಗಳೂರಿನ ಲೇಡಿಹಿಲ್ ನಿವಾಸಿಯಾಗಿದ್ದ ಮೈಕಲ್ ಡಿಸೋಜ ಅವರು ಪರ್ಕಳದ ತಮ್ಮ ಸಂಬಂಧಿಕರ ಮನೆಯಲ್ಲಿ ವಿಶ್ರಾಂತಿ ಜೀವನ ನಡೆಸುತ್ತಿದ್ದರು. ಶತಾಯುಷಿ ಸೈನಿಕನಿಗೆ 2024ರ ತನಕ ಮಂಗಳೂರಿನ ಆರ್‌ಟಿಓ ಅವರಿಂದ ನಾಲ್ಕು ಚಕ್ರದ ವಾಹನ ಚಾಲನೆ ಮಾಡುವ ಡ್ರೈವಿಂಗ್ ಲೈಸನ್ಸ್ ಕೂಡಾ ನೀಡಲಾಗಿತ್ತು. ಕಳೆದ ಎರಡು ದಿನಗಳಿಂದ ಅಸ್ವಸ್ಥಗೊಂಡಿದ್ದರು. ಸೈನ್ಯದಲ್ಲಿ 10 ವರ್ಷ ಸೇವೆಯ ನಂತರ ಪಿಡಬ್ಲ್ಯೂಡಿ ಇಲಾಖೆಗೆ ಸೇರಿ ಉಡುಪಿ ರಥಬೀದಿಯ ನಾಲ್ಕು ಬೀದಿ ಕಾಂಕ್ರೆಟ್ ರಸ್ತೆ, ಮಂಗಳೂರಿನ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಕೂಳೂರು ಸೇತುವೆ, ಮಲ್ಪೆ ಕಲ್ಮಾಡಿ ಸೇತುವೆ, ಬೈಂದೂರಿನ ಸೇತುವೆಗಳು ಮತ್ತು ಉಭಯ ಜಿಲ್ಲೆಯ ಹೆಚ್ಚಿನ ಹಳೆಯದಾದ ಸೇತುವೆಗಳನ್ನು ನಿರ್ಮಿಸುವಾಗ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99