ಇಂದು ಮಂಗಳೂರಿನ ವಿವಿಧೆಡೆ ವಿದ್ಯುತ್ ವ್ಯತ್ಯಯ - ಎಲ್ಲೆಲ್ಲಿ? ಇಲ್ಲಿ ಓದಿ
Friday, September 9, 2022
ಮಂಗಳೂರು:- 33/11ಕೆ.ವಿ ನೆಹರೂ ಮೈದಾನ ಉಪಕೇಂದ್ರದಿಂದ ಹೊರಡುವ 11ಕೆ.ವಿ ವಿವೇಕ್ ಮೋಟಾರ್ ಫೀಡರ್ ಮತ್ತು 11ಕೆ.ವಿ ಮಾರ್ಕೆಟ್ ಫೀಡರ್‍ಗಳಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
ಆದ ಕಾರಣ ಸೆ.09 ಬೆಳಿಗ್ಗೆ 10 ರಿಂದ ಸಂಜೆ 5ರ ವರೆಗೆ ಮೈದಾನ್ 3ನೇ ಕ್ರಾಸ್, 4ನೇ ಕ್ರಾಸ್, ಬೀಬಿ ಅಲಾಬಿ ರಸ್ತೆ, ರಾವ್ ಅಂಡ್ ರಾವ್ ಸರ್ಕಲ್, ಲೇಡಿಗೋಷನ್ ಹಾಸ್ಪಿಟಲ್, ಸೆಂಟ್ರಲ್ ಮಾರ್ಕೆಟ್, ಶಾಂತದುರ್ಗ, ಜಿ.ಎಚ್.ಎಸ್ ರಸ್ತೆ, ಪಿ.ಎಮ್. ರಾವ್ ರಸ್ತೆ, ಗೌರಿಮಠ ರಸ್ತೆ, ರಾಘವೇಂದ್ರ ಮಠ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ಕುಲಶೇಖರ
110/33/11ಕೆ.ವಿ ಕುಲಶೇಖರ ಉಪಕೇಂದ್ರದಿಂದ ಹೊರಡುವ 11ಕೆ.ವಿ ಎಕ್ಕೂರು ಮತ್ತು 11ಕೆ.ವಿ ಪಂಪ್‍ವೆಲ್ ಫೀಡರ್‍ಗಳಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದೆ.
ಆದ ಕಾರಣ ಸೆ.09 ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ಉಜ್ಜೋಡಿ, ನೆಕ್ಕರೆಮಾರ್, ಗೋರಿಗುಡ್ಡ, ಎಕ್ಕೂರು, ನೇತ್ರಾವತಿ ಗ್ಯಾರೇಜ್, ಕಡೆಕಾರ್, ಜಪ್ಪಿನಮೊಗರು, ತಾರ್ದೊಲ್ಯ, ತಂದೊಳಿಗೆ, ಡೆನ್ಮಾರ್ಕ ಲೇಔಟ್, ವಾಸುಕೀನಗರ, ಅಳಪೆ ಮಠ, ಕನಕರ ಬೆಟ್ಟು, ರಾಂತೋಟ, ಕುಕ್ಕಾಡಿ ತೋಟ, ಪರಂಜ್ಯೋತಿ ಭಜನಾ ಮಂದಿರ, ಸದಾಶಿವನಗರ, ಪಡೀಲ್ ಜಂಕ್ಷನ್, ಕಂಕನಾಡಿ ರೈಲ್ವೇ ಸ್ಟೇಷನ್, ನಾಗುರಿ, ಗರೋಡಿ, ಕಪಿತಾನಿಯೋ, ಬಲಿಪಮಾಲ್, ಮಹಾಲಿಂಗೇಶ್ವರ ಟೆಂಪಲ್, ನೇತ್ರಾವತಿ ಲೇಔಟ್, ಪಂಪ್‍ವೆಲ್, ಪ್ರಶಾಂತ್ ಭಾಗ್, ಸೈಮನ್ ಲೇನ್, ಗ್ಯಾಸ್ ಗೋಡೌನ್, ಮೇಘನಗರ, ಗುಡ್ಡೆತೋಟ, ರೆಡ್ ಬಿಲ್ಡಿಂಗ್, ಕೆಂಬಾರ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಲಿದೆ.
ಉರ್ವ ಮಾರ್ಕೆಟ್
33/11ಕೆ.ವಿ ಉರ್ವ ಮಾರ್ಕೆಟ್ ಉಪಕೇಂದ್ರದಿಂದ ಹೊರಡುವ 11ಕೆ.ವಿ ಡೊಮಿನಿಕ್ ಫೀಡರ್‍ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದೆ.
ಆದ ಕಾರಣ ಸೆ.09 ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ಕೊಡಿಕಲ್ ಕ್ರಾಸ್ ರೋಡ್, ಆಳಗುಡ್ಡ, ಜೋಕಟ್ಟೆ, ಜೆ.ಬಿ. ಲೋಬೋ ರೋಡ್, ಕೊಟ್ಟಾರ ಚೌಕಿ, ಎಸ್.ಎನ್.ಡಿ.ಪಿ., ನಾಗಬ್ರಹ್ಮ ಸನ್ನಿದಿ ರಸ್ತೆ, ಕಂಚಿಕಾರ ಗುತ್ತು, ಕೋಡಿಕಲ್ ಕಟ್ಟೆ, ವಲ್ಲಿ ಕಂಪೌಂಡ್, ಡೊಮಿನಕ್ ಚರ್ಚ್ ರೋಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ಕುಲಶೇಖರ
110/33/11ಕೆ.ವಿ ಕುಲಶೇಖರ ಉಪಕೇಂದ್ರದಿಂದ ಹೊರಡುವ 11ಕೆ.ವಿ ಶಕ್ತಿನಗರ ಫೀಡರ್‍ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದೆ.
ಆದ ಕಾರಣ ಸೆ.09 ಬೆಳಿಗ್ಗೆ 10 ರಿಂದ ಸಂಜೆ 6ರ ವರೆಗೆ ಕಲ್ಪಣೆ, ಕೈಕಂಬ, ಶಕ್ತಿನಗರ, ಕೆ.ವಿ.ಎಸ್. ಕುಚ್ಚಿಕಾಡ್, ಸರಕೋಡಿ, ನ್ಯೂರೋಡ್, ಬೇಕಲ್ ಕರ್, ಕೊಂಗೂರು, ಕ್ಯಾಸ್ತಲಿನೊ ಕಾಲೋನಿ, ರಾಜೀವನಗರ, ನೀತಿನಗರ, ಬೊಲ್ಯಪದವು, ಪಂಜಿರೆಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.