UDUPI : ಪರೀಕ್ಷೆಯಲ್ಲಿ ಕಡಿಮೆ ಅಂಕ ; ಮನನೊಂದು ನದಿಗೆ ಹಾರಿದ ವಿದ್ಯಾರ್ಥಿ
Thursday, September 8, 2022
ಸಿ.ಇ.ಟಿ ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದ ವಿದ್ಯಾರ್ಥಿಯೊಬ್ಬ ನದಿಗೆ ಹಾರಿದ್ದಾನೆ. ಶಾಯೀಶ್ ಶೆಟ್ಟಿ (18 )ನದಿಗೆ ಹಾರಿದ ಯುವಕ. ಶಿವಮೊಗ್ಗದ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದು ಶಾಹೀಶ್, ನೀಟ್ ಪರೀಕ್ಷೆ ಬರೆದಿದ್ದ. 630 ಅಂಕ ಪಡೆಯುವ ಭರವಸೆ ಇಟ್ಟುಕೊಂಡಿದ್ದ. ಅದರ ಫಲಿತಾಂಶಕ್ಕಾಗಿ ಕಾಯುತ್ತಿದ್ದ. ಇದೀಗ ಫಲಿತಾಂಶ ಬಂದಿದ್ದು, ಇಂದು ಬೆಳಿಗ್ಗೆ ಸೈಕಲ್ ತೆಗೆದುಕೊಂಡು ಸೈಬರ್ ಹೋಗಿ ಪರೀಕ್ಷಿಸಿದ್ದಾನೆ.
ಆಗ 140 ಅಂಕ ಬಂದಿದ್ದು ತಿಳಿದು ಕಡಿಮೆ ಅಂಕ ಬಂತೆಂದು ಮನನೊಂದು ನದಿಗೆ ಹಾರಿದ್ದಾನೆ ಎನ್ನಲಾಗಿದೆ. ಶಾಯೀಶ್ ಶೆಟ್ಟಿ ಸಂಗಂ ಬ್ರಿಡ್ಜ್ ಬಳಿ ಸೈಕಲ್ಲಿನಲ್ಲಿ ಬಂದಿದ್ದು, ಸೈಕಲ್ ಹಾಗೂ ಮೊಬೈಲನ್ನು ಬ್ರಿಡ್ಜ್ ಪಕ್ಕ ಇಡುತ್ತಿದ್ದಾಗ ಸ್ಥಳೀಯರು ಕೆಲವರು ನೋಡಿದ್ದಾರೆ. ಆದರೆ ಆತ ಏನು ಮಾಡುತ್ತಿದ್ದಾನೆ ಎನ್ನುವುದನ್ನು ಗ್ರಹಿಸುವ ಮೊದಲೇ ಅವರ ಕಣ್ಣೆದುರೇ ನದಿಗೆ ಹಾರಿದ್ದಾನೆ. ಪೊಲೀಸರು, ಮುಳುಗು ತಜ್ಞರು ಹಾಗೂ ಸ್ಥಳೀಯರು ವಿದ್ಯಾರ್ಥಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ