
UDUPI : ಬಸ್ಸಿನಲ್ಲಿ ಕಳ್ಳಿಯ ಕೈಚಳಕ ಹೇಗಿದೆ ನೋಡಿ..! (Video)
Wednesday, September 28, 2022
ಕರಾವಳಿಯ ಖಾಸಗಿ ಬಸ್‌ಗಳಲ್ಲಿ ಅಳವಡಿಸಿದ, ಸಿಸಿ ಕ್ಯಾಮಾರಾಗಳಿಂದ ಕಳ್ಳರ ಕೈಚಳಕ ಸೆರೆಯಾಗುತ್ತಿದ್ದು, ಪೊಲೀಸರಿಗೆ ಕಳ್ಳರನ್ನು ಸೆರೆ ಹಿಡಿಯಲು ನೆರವಾಗುತ್ತಿದೆ
ಕೆಲ ದಿನಗಳ ಹಿಂದೆ ಖಾಸಗಿ ಬಸ್ ವೊಂದರಲ್ಲಿ ಮಹಿಳೆಯೊಬ್ವರು ಬಸ್ ನಿಂದ ಇಳಿಯುತ್ತಿದ್ದ ಮಹಿಳೆಯ ಪರ್ಸ್ ಎಗರಿಸುತ್ತಿರುವ ಸಿಸಿ ಕ್ಯಾಮೆರಾ ದೃಶ್ಯ ವೈರಲ್ ಆಗಿತ್ತು.
ಇದೀಗ ಅದೇ, ರೀತಿಯ ಕೈ ಚಳಕದ ವಿಡಿಯೋ ವೈರಲ್ ಆಗುತ್ತಿದೆ. ಖಾಸಗಿ ಬಸ್ ನಲ್ಲಿ ಡ್ರೈವರ್ ನ ಹಿಂಬದಿ ಸೀಟಿನಲ್ಲಿ ಪ್ರಯಾಣಿಸುತ್ತಿರುವ ಮಹಿಳೆ ,ನಿಂತು ಪ್ರಯಾಣಿಸುತ್ಯಿದ್ದ ವಿದ್ಯಾರ್ಥಿನಿಯ ಪರ್ಸ್ ಅನ್ನು ತನ್ನ ಕೈಚಳದ ಮೂಲಕ ಅನಾಮತ್ತಾಗಿ ಎಗರಿಸಿದ್ಧಾರೆ.
ಬಳಿಕ ಬಗ್ಗಿ ತಮ್ಮ ಚೀಲದೊಳಗೆ ಹಾಕಿಕೊಂಡಿದ್ದು, ಸದ್ಯ ಈ ವಿಡಿಯೋ , "ಬಸ್ ನಲ್ಲಿ ಸಂಚರಿಸುವ ಪ್ರಯಾಣಿಕರು ಜಾಗರೂಕತೆ ವಹಿಸಬೇಕು" ಎಂಬ ಒಕ್ಕಣೆಯೊಂದಿಗೆ ವಾಟ್ಸಾಪ್ ನಲ್ಲಿ ಹರಿದಾಡುತ್ತಿದೆ.