UDUPI : ಸಂಸದೆ ಶೋಭಾ ಕರಂದ್ಲಾಜೆ ವಿದ್ ಸೆಲ್ಪಿ ಸ್ಪರ್ಧೆ : ಗೆದ್ದವರಿಗೆ ಮಿಥುನ್ ರೈಯಿಂದ 5 ಸಾವಿರ ನಗದು ಬಹುಮಾನ
Wednesday, September 28, 2022
ಸಂಸದೆ ಶೋಭಾ ಕರಂದ್ಲಾಜೆ ವಿದ್ ಸೆಲ್ಪಿ ಹೀಗೊಂದು ಸ್ಪರ್ಧೆ ಉಡುಪಿಯಲ್ಲಿ ಸುದ್ದಿಯಾಗುತ್ತಿದೆ. ಗೆದ್ದವರಿಗೆ ಕಾಂಗ್ರೆಸ್ ಮುಖಂಡ ಮಿಥುನ್ ರೈ ಅವರಿಂದ 5 ಸಾವಿರ ಬಹುಮಾನ ಕೂಡ ಇದೆಯಂತೆ.
ಹೌದು. ಉಡುಪಿಯ ರಸ್ತೆ ಅವ್ಯವಸ್ಥೆ ವಿರುದ್ಧ ಕಾಂಗ್ರೆಸ್ ನಿಂದ ವಿನೂತನ ಪ್ರತಿಭಟನೆ ನಡೆದಿದ್ದು, ಪ್ರತಿಭಟನೆಯಲ್ಲಿ ಭಾಗವಹಿಸಿದ, ಕಾಂಗ್ರೆಸ್ ಮುಖಂಡ ಮಿಥುನ್ ರೈ, ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಅಕ್ಟೋಬರ್ 6 ರಿಂದ 14ರೊಳಗೆ ಉಡುಪಿ, ಕಾಪು, ಕುಂದಾಪುರದಲ್ಲಿ ಶೋಭಾ ಜೊತೆ ಸೆಲ್ಫಿ ತೆಗೆದು ಕಾಂಗ್ರೆಸ್ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಮೆಂಡನ್ ಅವರಿಗೆ ಕಳುಹಿಸಿ ಕೊಡಿ. ಮೊದಲು ಕಳುಹಿಸಿಕೊಟ್ಟ 5 ಮಂದಿಗೆ ತಲಾ 5 ಸಾವಿರ ನೀಡುದಾಗಿ ಕಾಂಗ್ರೆಸ್ ಮುಖಂಡ ಮಿಥುನ್ ರೈ ಘೋಷಣೆ ಮಾಡಿದ್ದಾರೆ.
ಅಕ್ಟೋಬರ್ 14ರ ನಂತರವೂ ಸಂಸದೆ ಶೋಭಾ ಉಡುಪಿಗೆ ಬಾರದೇ ಇದ್ರೆ ಎಲ್ಲಾ ಠಾಣೆಯಲ್ಲೂ ನಾಪತ್ತೆ ದೂರು ದಾಖಲಿಸುತ್ತೇವೆ. ಉಡುಪಿಯ ಪ್ಲೈ ಓವರ್ ಮೇಲೆ ಶೋಭಾ ಕರಂದ್ಲಾಜೆ ಪೋಸ್ಟರ್ ಅಂಟಿಸುತ್ತೇವೆ ಅಂತ ಮಿಥುನ್ ರೈ ವ್ಯಂಗ್ಯವಾಡಿದ್ದಾರೆ.