ಬುರ್ಖಾ ಧರಿಸದಿದ್ದಕ್ಕೆ ಹಿಂದೂ ಪತ್ನಿಯನ್ನು ಕೊಂದ ಪತಿ! - VIDEO NEWS
Wednesday, September 28, 2022
ಮುಂಬಯಿ : ಬುರ್ಖಾ ಧರಿಸಲಿಲ್ಲ ಎಂಬ ಕಾರಣಕ್ಕೆ ಮುಂಬಯಿಯಲ್ಲಿ ಪತ್ನಿಯನ್ನು ಕೊಂದ ಘಟನೆ ನಡೆದಿದೆ.
20 ವರ್ಷದ ರುಪಾಲಿ ಹತ್ಯೆಯಾದ ಮಹಿಳೆ. ಈಕೆಯ ಗಂಡ ಇಕ್ಬಾಲ್ ಶೇಖ್ ( 36 ) ಎಂಬಾತ ಪತ್ನಿ ಯನ್ನು ಹತ್ಯೆ ಮಾಡಿದ್ದಾನೆ.
ರುಪಾಲಿ ಯ ಗಂಟಲನ್ನು ಸೀಳಿ ಹತ್ಯೆ ಈತ ಭೀಕರವಾಗಿ
ಮಾಡಿದ್ದಾನೆ . ಸೋಮವಾರ ರಾತ್ರಿ ಮಗ ಯಾರ ಜತೆಗೆ ಇರಬೇಕು ಹಾಗೂ ಮುಸ್ಲಿಂ ಸಮುದಾಯದ ನಿಯಮಗಳ ಪಾಲನೆ ವಿಚಾರವಾಗಿ ದಂಪತಿಗಳ ನಡುವೆ ಜಗಳ ಶುರುವಾಗಿತ್ತು . ಇದು ಮಾತು ಬೆಳೆದು ಇಕ್ಬಾಲ್ ಶೇಖ್ ಪತ್ನಿಯನ್ನು ಕೊಲೆಗೈದಿ ದ್ದಾನೆ .
ಟ್ಯಾಕ್ಸಿಡೈವರ್ ಆಗಿರುವ ಇಕ್ಬಾಲ್ ಮತ್ತು ಹಿಂದೂ ಸಮುದಾಯಕ್ಕೆ ಸೇರಿದ ರುಪಾಲಿ ಅವರ ವಿವಾಹ 2019 ರಲ್ಲಿ ಆಗಿತ್ತು . ಅನಂತರ ಆಕೆ ತನ್ನ ಹೆಸರನ್ನು ಜಾರಾ ಎಂದು ಬದಲಿಸಿದ್ದಳು . ಆಕೆಗೆ ಇಕ್ವಾಲ್‌ನ ಕುಟುಂಬ ಕೆಲವು ಸಮಯದಿಂದ ಬುರ್ಖಾ ಧರಿಸಲು ಒತ್ತಡ ಹೇರುತ್ತಿತ್ತು . ಈಗ ಅದು ಆಕೆಯ ಹತ್ಯೆಯಲ್ಲಿ ಅಂತ್ಯವಾಗಿದೆ .