PG ಯಲ್ಲಿ ಯುವತಿಯರ ಸ್ನಾನದ ವಿಡಿಯೋ ವಾಟ್ಸಪ್ ನಲ್ಲಿ ಶೇರ್- ವೈದ್ಯ ಸೇರಿ ಇಬ್ಬರ ಬಂಧನ
Wednesday, September 28, 2022
ಮಧುರೈ : ಮದುರೈನಲ್ಲಿ ಪಿಜಿ ಹಾಸ್ಟೆಲ್ ಮಹಿಳೆಯರ ಖಾಸಗಿ ವಿಡಿಯೊ ಹಾಗೂ ಪೋಟೊ ಸೋರಿಕೆ ಪ್ರಕರಣ ವರದಿಯಾಗಿದೆ.
ಈ ಸಂಬಂಧ ವೈದ್ಯ ಹಾಗೂ ಆತನ ಗೆಳತಿಯನ್ನು ಮಧುರೈ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ . ರಾಮನಾಥಪುರಂನ ವೈದ್ಯ ಡಾ.ಆಶಿಕ್ ಹಾಗೂ ಆತನ ಗೆಳತಿ ಜನನಿಯನ್ನು ಬಂಧಿಸಿರುವ ಮದುರೈನ ಅಣ್ಣಾ ನಗರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ .
ವೈದ್ಯ ಆಶಿಕ್ ಅವರ ಕ್ಲಿನಿಕ್‌ನಲ್ಲಿ ಕೆಲಸ ಮಾಡುತ್ತಿದ್ದ ಜನನಿ , ಮದುರೈನ ಪಿಜಿಯೊಂದರಲ್ಲಿ ವಾಸವಿದ್ದಳು. ಪಿಜಿಯಲ್ಲಿ ವಾಸವಿದ್ದ ಮಹಿಳೆಯರು ಸ್ನಾನ ಮಾಡುವಾಗ , ಡೆಸ್ ಬದಲಿಸುತ್ತಿರುವಾಗ ವಿಡಿಯೊ , ಪೋಟೊಗಳನ್ನು ತೆಗೆಯುತ್ತಿದ್ದಳು.
ಪ್ರತಿ ದಿನ ಇದೇ ರೀತಿ ಮಾಡುತ್ತಿದ್ದ ಜನನಿ ಬಗ್ಗೆ ಅನುಮಾನಗೊಂಡ ಕೆಲವರು ಮೊಬೈಲ್ ಫೋನ್ ಪರಿಶೀಲನೆ ಮಾಡಿದಾಗ ಆಕೆ ಯುವತಿಯರ ಖಾಸಗಿ ಪೋಟೊ , ವಿಡಿಯೊಗಳನ್ನು ವಾಟ್ಸ್‌ಆ್ಯಪ್‌ನಲ್ಲಿ ಹಂಚಿಕೊಂಡಿದ್ದು ಬೆಳಕಿಗೆ ಬಂದಿದೆ. ಕೂಡಲೇ ಹಾಸ್ಟೆಲ್ ವಾರ್ಡನ್ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರು .