-->

ನಾದಿನಿ ಕೈ ಕತ್ತರಿಸಿದ ಅಪರಾಧಿ ಭಾವನಿಗೆ 7ವರ್ಷ ಸಜೆ, ದಂಡ

ನಾದಿನಿ ಕೈ ಕತ್ತರಿಸಿದ ಅಪರಾಧಿ ಭಾವನಿಗೆ 7ವರ್ಷ ಸಜೆ, ದಂಡ

ಮಧುಗಿರಿ: ಪತ್ನಿ ಮೇಲೆ ಅನುಮಾನಗೊಂಡ ಅಸಾಮಿಯೋರ್ವನು ಆಕೆಯ ಕೊಲೆಗೆ ಯತ್ನಿಸಿದ್ದ ಸಂದರ್ಭ ಆಕೆಯ ರಕ್ಷಣೆಗೆ ಬಂದ ನಾದಿನಿಯ ಎಡಗೈ ಕತ್ತರಿಸಿರುವ ಆರೋಪ 4 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿರುವ ಹಿನ್ನೆಲೆಯಲ್ಲಿ 7 ವರ್ಷ ಸಾದಾ ಸಜೆ ಮತ್ತು 30 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. 

ಆಂಧ್ರ ಪ್ರದೇಶದ ಮಡಕಶಿರಾ ನಿವಾಸಿಯಾಗಿದ್ದ ಹನುಮಂತ ( 45 ) ಶಿಕ್ಷೆಗೊಳಗಾದ ಅಪರಾಧಿ.

2020ರ ಮಾರ್ಚ್ ನಲ್ಲಿ ಮಧುಗಿರಿ ತಾಲೂಕು ಡಿ.ವಿ.ಹಳ್ಳಿಯಲ್ಲಿ ತನ್ನ ಮಾವ ತಿಪ್ಪಸ್ವಾಮಿ ಮನೆಯಲ್ಲಿ ಹೆಂಡತಿ ಅನಿತಾಳ ಕೊಲೆಗೆ ಯತ್ನಿಸಿದ್ದ. ಈ ಸಂದರ್ಭ ಅನಿತಾ ಅವರ ತಂಗಿ ಮೇಘನಾ (16) ಕೊಲೆಯನ್ನು ತಪ್ಪಿಸಲು ಬಂದೊದ್ದಾಳೆ. ಈ ವೇಳೆ ಆಕೆ ಕೈ ಅಡ್ಡ ಇಟ್ಟಾಗ ಆರೋಪಿ ಬೀಸಿದ ಏಟು ಮೇಘನಾ ಎಡಗೈನ ಮುಂಗೈಗೆ ಬಿದ್ದಿದೆ. ಪರಿಣಾಮ ಅವರ ಎಡಗೈ ಕತ್ತರಿಸಿ ಹೋಗಿತ್ತು. ಈ ಬಗ್ಗೆ ಪಿಎಸ್‌ಐ ಎಲ್.ಕಾಂತರಾಜು ದೋಷಾರೋಪಣ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಬಿ.ಎಂ.ನಿರಂಜನಮೂರ್ತಿ ವಾದ ಮಂಡಿಸಿದ್ದರು.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99