
UDUPI : ಮಹಡಿ ಮೇಲಿಂದ ಬಿದ್ದು ಬಾಲಕ ಸಾವು
ಮಹಡಿ ಮೇಲೆ ಜೇನು ತೆಗೆಯುವುದನ್ನು ನೋಡುತ್ತಿದ್ದ ಬಾಲಕನೋರ್ವ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದ ಘಟನೆ ಉಡುಪಿ ನಗರದ ಕನರ್ಪಾಡಿ ಎಂಬಲ್ಲಿ ನಡೆದಿದೆ. ಆಂದ್ರಪ್ರದೇಶ ಮೂಲದ ಆಶಿಕ್ (13 ವರ್ಷ) ಸಾವನ್ಪಿದ ಬಾಲಕ.
ಆಂದ್ರಪ್ರದೇಶ ಕುಟುಂಬವೊಂದು ಮೂರು ದಿನದ ಹಿಂದೆ ಉಡುಪಿಗೆ ಬಂದು ಉದ್ಯಾವರ ಚರ್ಚ್ ಬಳಿ ವಾಸವಿದ್ದರು.
ಊರೂರು ತಿರುಗಿ ಜೇನು ತೆಗೆಯುವಯುವ ಕೆಲಸ ಮಾಡಿಕೊಂಡಿದ್ದರು. ಅದರಂತೆ ಪೋಷಕರು ಕನರ್ಪಾಡಿಯ ಜಯದುರ್ಗಾ ದೇವಸ್ಥಾನದ ಪಕ್ಕದ ಅಪಾರ್ಟ್ಮೆಂಟ್ ನಲ್ಲಿ ಜೇನು ತೆಗೆಯುತ್ತಿದ್ದಾಗ, ಮಹಡಿಯಲ್ಲಿ ನಿಂತು ಆಶಿಕ್ ಗಮನಿಸುತ್ತಿದ್ದ ಈ ವೇಳೆ ಆಯಾತಪ್ಪಿ ಕೆಳಗೆ ಬಿದ್ದಿದ್ದಾನೆ. ಗಂಭೀರ ಗಾಯಗೊಂಡ ಬಾಲಕನನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.