UDUPI : ಸಮುದ್ರದಲ್ಲಿ ಮುಳುಗಿ ಮೀನುಗಾರ ಸಾವು
Friday, September 23, 2022
ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರೊಬ್ಬರು ಅಕಸ್ಮಾತ್ತಾಗಿ ಸಮುದ್ರಕ್ಕೆ ಬಿದ್ದು, ಮೇಲೆ ಬಾರಲಾಗದೇ ಮುಳುಗಿ ಸಾವನ್ಪಿದ ಘಟನೆ ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ನಡೆದಿದೆ.
ಮಲ್ಯರ ಬೆಟ್ಟು ನಿವಾಸಿ ವೆಂಕಟೇಶ್ ಖಾರ್ವಿ ಸಾವನ್ಪಿದ ಮೀನುಗಾರ. ಮಲ್ಯರ ಬೆಟ್ಟುವಿನ ವೆಂಕಟೇಶ್ ಖಾರ್ವಿ ಅವರು ಮೀನುಗಾರಿಕೆಗೆ ತೆರಳಿದ್ದಾಗ ಅಕಸ್ಮಾತ್ತಾಗಿ ಸಮುದ್ರಕ್ಕೆ ಬಿದ್ದಿದ್ದು, ಮೇಲೆ ಬರಲಾಗದೇ ಮುಳುಗಿ ಸಾವನ್ಪಿದ್ದಾರೆ. ಗಂಗೊಳ್ಳಿ ಆಪತ್ಯಾಂದವ ಮುಳುಗು ತಜ್ಞ ದಿನೇಶ್ ಖಾರ್ವಿ ಅವರು ಶೋಧ ಕಾರ್ಯ ನಡೆಸಿ, ಸಮುದ್ರದಿಂದ ಮೃತ ದೇಹವನ್ನು ಹೊರತೆಗೆದಿದ್ದಾರೆ. ಬೈಂದೂರು ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ