NIA ದಾಳಿ ಖಂಡಿಸಿ PFI ಪ್ರತಿಭಟನೆ : 11 ಮಂದಿಯ ವಿರುದ್ದ ಎಫ್.ಐ.ಆರ್
Friday, September 23, 2022
ಅನುಮತಿ ಪಡೆಯದೇ ಪ್ರತಿಭಟನೆ ಮಾಡಿದ ಹಿನ್ನಲೆಯಲ್ಲಿ 11 ಮಂದಿ PFI ಕಾರ್ಯಕರ್ತರ ವಿರುದ್ದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಸ್‌ಡಿಪಿಐ ಹಾಗೂ ಪಿಎಫ್‌ಐ ಕಚೇರಿಗೆ ಎನ್‌ಐಎ ದಾಳಿ ಖಂಡಿಸಿ ನಿನ್ನೆ ಪಿ.ಎಫ್.ಐ ಕಾರ್ಯಕರ್ತರು, ಪೂರ್ವಾನುಮತಿ ಪಡೆಯದೆ ಸಾರ್ವಜನಿಕ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ರಸ್ತೆ ತಡೆದು ಪ್ರತಿಭಟನೆ ನಡೆಸಿದ ಹಿನ್ನೆಲೆ ನಗರದಲ್ಲಿ ಸಂಚಾರಕ್ಕೆ ದೊಡ್ಡ ತೊಡಕಾಗಿತ್ತು ಕೊನೆಗೆ ಪೊಲೀಸರು ಲಾಠಿಚಾರ್ಜ್ ನಡೆಸಿ, ಗುಂಪು ಚದುರಿಸಿದ್ದರು. ಇಂದು ಪ್ರತಿಭಟನೆ ನಡೆಸಿದ, ಫಯಾಸ್ ಅಹಮ್ಮದ್, ಮಹಮ್ಮದ್ ಆಶ್ರಫ್, ಹಾರೂನ್ ರಶೀದ್, ಮಹಮ್ಮದ್ ಜುರೈಜ್, ಇಶಾಕ್ ಕಿದ್ವಾಯ್, ಶೌಖತ್ ಆಲಿ, ಮಹಮ್ಮದ್ ಜಹೀರ್ ವಿರುದ್ದ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.