
UDUPI : ಮನೆಯಿಂದ ಹೊರ ಹೋದ ಯುವತಿ ನಾಪತ್ತೆ
Friday, September 23, 2022
ಮನೆಯಿಂದ ಹೊರಗೆ ಹೋದ ಯುವತಿ ವಾಪಾಸು ಮನೆಗೆ ಬಾರದೇ ನಾಪತ್ತೆಯಾಗಿರುವ ಘಟನೆ ಉಡುಪಿ ಜಿಲ್ಲೆಯ ಪುತ್ತೂರು ಗ್ರಾಮದ ವಿಷ್ಣುಮೂರ್ತಿ ನಗರದಲ್ಲಿ ನಡೆದಿದೆ. ನಿಶಾ ಎನ್ ಎಸ್ ಆಮೀನ್ (21) ನಾಪತ್ತೆಯಾದ ಯುವತಿ.
ಸಪ್ಟೆಂಬರ್ 20ರಂದು ನಿಶಾ ಎನ್ ಎಸ್ ಆಮೀನ್ ಬೆಳಗ್ಗೆ 8 ಗಂಟೆಗೆ ಮನೆಯಿಂದ ಹೊರ ಹೋಗಿದ್ದಳು. ನಂತರ ಮನೆಗೆ ವಾಪಾಸು ಬಾರದೇ, ಸಂಪರ್ಕಕ್ಕೂ ಸಿಗದೇ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಮನೆಯವರು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಿಶಾ, 5 ಅಡಿ 2 ಇಂಚು ಎತ್ತರ, ದಪ್ಪ ಮೈಕಟ್ಟು, ಗೋಧಿ ಮೈಬಣ್ಣ, ಅಗಲ ಮುಖ ಹೊಂದಿದ್ದು, ಕನ್ನಡ, ಇಂಗ್ಲೀಷ್, ಹಿಂದಿ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಗಳನ್ನು ಸಂಪರ್ಕಿಸುವಂತೆ ಕೋರಿದ್ದಾರೆ..