UDUPI : ಹಿಂದೂ ಮುಸ್ಲಿಂ ಸಾಮರಸ್ಯದ ಉರುಸ್
Thursday, September 22, 2022
ಕೋಮು ಸಂಘರ್ಷ ಅಂದ್ರೆ ರಾಜ್ಯದಲ್ಲಿ ನೆನಪಾಗೋದು ಕರಾವಳಿ. ಆದ್ರೆ ಕರಾವಳಿಯಲ್ಲಿ ಕೋಮು ಸೌಹಾರ್ದತೆಗೂ ಕೊರತೆ ಇಲ್ಲ ಅನ್ನೋದಕ್ಕೆ ಉಡುಪಿ ಜಿಲ್ಲೆಯ ಕಾಪುವಿನ ಕೈಪುಂಜಾಲು ಎಂಬಲ್ಲಿ ಹಿಂದೂ ಮುಸ್ಲಿಮರು ಒಟ್ಟಾಗಿ ನಡೆಸುವ ಉರುಸ್ ಆಚರಣೆಯೇ ಸಾಕ್ಷಿ. ಅರಬ್ಬೀ ಸಮುದ್ರ ತಟದ ತೆಂಗಿನ ತೋಟದ ನಡುವೆ ಇರುವ ಸಯ್ಯದ್ ಅರಬಿ ವಲಿಯುಲ್ಲಾ ದರ್ಗಾ ಕೈಂಪುಜಾಲು ಇದನ್ನು ನಿರ್ಮಾಣ ಮಾಡಿದ್ದು, ಹಿಂದೂಗಳು. ಪ್ರತಿದಿನ ದರ್ಗಾ ಗುಡಿಸಿ ಒರೆಸಿ ಸ್ವಚ್ಛ ಮಾಡಿ ದೀಪ ಇಡುವವರು ಕೂಡ ನೆರೆ ಮನೆಯ ಹಿಂದೂ ಸಮುದಾಯಕ್ಕೆ ಸೇರಿದವರೇ. ಅಷ್ಟೇ ಅಲ್ಲದೇ ಇದು ಇರೋದು ಕೂಡ ಹಿಂದೂ ಸಮುದಾಯಕ್ಕೆ ಸೇರಿದವರೊಬ್ಬರ ಸ್ಥಳದಲ್ಲೇ. ಪ್ರತಿವರ್ಷ ಇಲ್ಲಿ ಅದ್ದೂರಿ ಉರುಸು ಉತ್ಸವ ನಡೆಸಲಾಗುತ್ತೆ,
ಹಿಂದೂ ಮುಸ್ಲಿಮರು ಅಂತ ಭೇದ ಭಾವ ಇಲ್ಲದೇ ಸಾವಿರಾರು ಮಂದಿ ಸೇರ್ತಾರೆ. ದರ್ಗಾದಲ್ಲಿ ಕಾಣಿಕೆ ಸಲ್ಲಿಸಿ ಪ್ರಸಾದವನ್ನು ಮನೆಗೆ ಕೊಂಡು ಹೋಗುತ್ತಾರೆ. ಕಳೆದ ಎರಡು ವರ್ಷಗಳಲ್ಲಿ ಕೊರೊನಾ ಕಾರಣದಿಂದ ಅದ್ದೂರಿ ಉರುಸ್‌ಗೆ ಕಡಿವಾಣ ಹಾಕಲಾಗಿತ್ತು. ಈ ವರ್ಷ ಹಿಂದೂ ಮುಸ್ಲಿಮರು ಒಟ್ಟಾಗಿ ಅದ್ದೂರಿ ಉರುಸ್ ಆಚರಣೆ ಮಾಡಿದ್ದಾರೆ. ಸಾಮರಸ್ಯ ಮೆರೆದಿದ್ದಾರೆ..