
UDUPI : ನಾಡದೋಣಿ ಬಲೆಗೆ ಸಿಕ್ತು ರಾಶಿ ರಾಶಿ ಮಿಲ್ಕ್ ತಾಟೆ
Thursday, September 22, 2022
ಸದ್ಯ ಕರಾವಳಿಯಲ್ಲಿ ಮೀನಿನ ಸುಗ್ಗಿಯೇ ನಡೆಯುತ್ತಿದೆ. ಇತ್ತೀಚೆಗೆ ಉಡುಪಿಯ ಮಲ್ಪೆ ಸಮೀಪದ ತೊಟ್ಟಂ ಎಂಬಲ್ಲಿ ರಾಶಿ ರಾಶಿ ಬೂತಾಯಿ ಮೀನುಗಳು ದಡಕ್ಕೆ ಬಂದು ಬಿದ್ದಿದ್ದವು. ಮತ್ತೆ ಉಡುಪಿಯಲ್ಲಿ ಮಿಲ್ಕ್ ತಾಟೆ ಹೆಸರಿನ ಮೀನುಗಳು ಬೃಹತ್ ಪ್ರಮಾಣದಲ್ಲಿ ಸಿಕ್ಕಿದೆ. ಸಣ್ಣ ನಾಡದೋಣಿಯಲ್ಲಿ ಮೀನುಗಾರರ ಬಲೆಗೆ ಬೃಹತ್ ಪ್ರಮಾಣ ಮಿಲ್ಕ್ ತಾಟೆ ಸಿಕ್ಕಿದೆ.
ಎರಡರಿಂದ ಮೂರು ಕೆ.ಜಿ. ತೂಕುವ ಸುಮಾರು 100 ತಾಟೆಮೀನು ಸಿಕ್ಕಿದೆ.
ಮಲ್ಪೆ ದಕ್ಕೆಯ ಹರಾಜು ಪ್ರಾಂಗಣದಲ್ಲಿ ಇದನ್ನು ಹರಡಿ ಇಡಲಾಯಿತು. ಕೆ.ಜಿ.ಗೆ 280 ರೂ.ಗಳಂತೆ ಹರಾಜಿನಲ್ಲಿ ಮಾರಾಟವಾಗಿದೆ. ಹೆಚ್ಚಾಗಿ ಕೇರಳಕ್ಕೆ ರವಾನೆಯಾಗಿದೆ. ಈ ಮೀನಿನ ವೈಜ್ಞಾನಿಕ ಹೆಸರು ಬ್ಲ್ಯಾಕ್ ಟಿಪ್ ರೀವ್ ಶಾರ್ಕ್ ಎಂದು. ಇದು ಕೆಂಪು ಸಮುದ್ರ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ. ನಮ್ಮ ಕರಾವಳಿಯಲ್ಲಿ ಬೃಹತ್ ಬಂಡೆಗಳ ಸಮೀಪ ಇರುತ್ತವೆ. ಈ ಮೀನಿನ ಕೆಳ ಭಾಗದಲ್ಲಿರುವ ರೆಕ್ಕೆ, ಬಾಲ, ಕಿವಿ ಮೊದಲಾದ ಅವಯವಗಳಿದ್ದು ಭಾರೀ ಬೇಡಿಕೆ ಇದೆ. ಅದನ್ನು ಸ್ಥಳದಲ್ಲೇ ಕತ್ತರಿಸಿ ಪ್ರತ್ಯೇಕವಾಗಿ ಸಂಗ್ರಹಿಸಿಟ್ಟು ಸಾಗಿಸಲಾಗುತ್ತದೆ. ಅದನ್ನು ಬಿಸಿಲಿನಲ್ಲಿ ಒಣಗಿಸಿ ವಿದೇಶಕ್ಕೆ ರಫ್ತು ಮಾಡಲಾಗುತ್ತಿದ್ದು, ಔಷಧ ತಯಾರಿಕೆಗೆ ಬಳಸಲಾಗುತ್ತದೆ.