UDUPI : ಜನ ಕಿಡ್ನಾಫ್ ಅಂತ ಪೊಲೀಸರಿಗೆ ದೂರು ನೀಡಿದ್ರು, ಆದ್ರೆ ಅದು ಕಿಡ್ನಾಫ್ ಅಲ್ಲ..! ಹಾಗಾದ್ರೆ ಏನದು..?
Sunday, September 11, 2022
ಉಡುಪಿಗೆ ಇನ್ನೋವಾ ಕಾರಿನಲ್ಲಿ ಬಂದ ತಂಡ ಉಡುಪಿಯ ಶ್ರೀಕೃಷ್ಣ ಮಠದ ಸಮೀಪದಿಂದ ವ್ಯಕ್ತಿಯೋರ್ವರನ್ನು ಬಲವಂತವಾಗಿ ಕಾರಿನಲ್ಲಿ ಕುಳ್ಳಿರಿಸಿ, ಕರೆದುಕೊಂಡು ಹೋದ್ರು, ಜನ ಕಿಡ್ನಾಫ್ ಅಂತ ಪೊಲೀಸರಿಗೆ ದೂರು ನೀಡಿದ್ರು, ಮಂಗಳೂರಿನ ಕೂಳೂರು ಸಮೀಪ ದಲ್ಲಿ ಪೊಲೀಸರು ಅಡ್ಡಗಟ್ಟಿದ್ದು, ಕಾರಿನಲ್ಲಿದ್ದ ನಾಲ್ವರನ್ನು ವಶಕ್ಕೆ ಪಡೆದರು. ಆದ್ರೆ ಅದು ಕಿಡ್ನಾಫ್ ಆಗಿರಲಿಲ್ಲ.
ಹೌದು.. ಬೆಂಗಳೂರಿ ಇನ್ನೋವಾ ಕಾರಿನಲ್ಲಿ ಬಂದಿದ್ದ ತಂಡವೊಂದು ಉಡುಪಿಯ ಕೃಷ್ಣಾ ಮಠದ ಸಮೀಪದಿಂದ, ಒಬ್ಬರನ್ನು ಬಲವಂತವಾಗಿ ಕಾರಿಗೆ ಹಾಕಿಕೊಂಡು ಹೋಗಿದ್ದರು. ಇದನ್ನು ಕಂಡ ಸ್ಥಳೀಯರು ಅಪಹರಣವಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಉಡುಪಿ ನಗರ ಪೊಲೀಸರು ವಿವಿಧ ವಿಭಾಗ ಹಾಗೂ ಠಾಣೆಗಳಿಗೆ ಎಚ್ಚರಿಕೆ ನೀಡಿದ್ದರು. ವಾಹನ ಕಲ್ಸಂಕ ಮಾರ್ಗವಾಗಿ ಕರಾವಳಿ ಬೈಪಾಸ್ ತಲುಪಿರುವ ಬಗ್ಗೆ ಟ್ರಾಫಿಕ್ ಪೊಲೀಸರು ಮಾಹಿತಿ ಕಲೆ ಸಿಕ್ಕಿತು. ಅಲ್ಲಿಂದ ಹೆಜಮಾಡಿ ಟೋಲ್‌ಗೇಟ್ ದಾಟಿ ಮುಂದೆ ಹೋಗಿರುವ ಬಗ್ಗೆ ಸಿಸಿ ಕೆಮರಾ ದೃಶ್ಯಾವಳಿಗಳಿಂದ ಪೊಲೀಸರಿಗೆ ಗೊತ್ತಾಯಿತು. ನಂತರ ಉಡುಪಿ ಪೊಲೀಸರು ಮಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಳೂರು ಬಳಿ ಪೊಲೀಸರು ಕಾರನ್ನು ತಡೆದು ಕಾರಿನಲ್ಲಿದ್ದ ನಾಲ್ವರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದಾಗ, ಒಮ್ಮೆಗೆ ಪೊಲೀಸರೇ ದಂಗಾಗಿ ಬಿಟ್ಟರು. ಘಟನೆಯ ನಿಜಾಂಶವೆಂದರೆ, ಬೆಂಗಳೂರಿನ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನಿಂದ ತಪ್ಪಿಸಿಕೊಂಡು ಉಡುಪಿಗೆ ಬಂದಿದ್ದ ಮಾನಸಿಕ ಅಸ್ವಸ್ಥ ರೋಗಿಯನ್ನು ಮನೆಯವರು ರಕ್ಷಣೆ ಮಾಡಿದ್ದಾಗಿತ್ತು..