ಪ್ರವೀಣ್ ನೆಟ್ಟಾರ್ ಕೊಲೆ ಆರೋಪಿಯ ಸಹೋದರ ಬಂಧನ
Sunday, September 11, 2022
ಮಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ ಆರೋಪಿ ಶಫೀಕ್ ಎಂಬಾತನ ತಮ್ಮ ಅಬ್ದುಲ್ ಸಫ್ರೀತ್ ಎಂಬಾತನನ್ನು ಕೊಲೆ ಬೆದರಿಕೆಯೊಡ್ಡಿದ ಪ್ರಕರಣದಲ್ಲಿ ಬಂಧಿಸಲಾಗಿದೆ.
ಸುಳ್ಯ ತಾಲೂಕು ಬೆಳ್ಳಾರೆ ಗ್ರಾಮದ ನಿವಾಸಿ, ದೇವಿ ಹೈಟ್ಸ್ ಲಾಡ್ಜಿನಲ್ಲಿ ಮ್ಯಾನೇಜರ್ , ಹಿಂದೂ ಸಂಘಟನೆಯ ಕಾರ್ಯಕರ್ತ ಪ್ರಶಾಂತ ಪೂಂಜ ಎಂಬುವವರಿಗೆ ಅಬ್ದುಲ್ ಸಪ್ರಿತ್ ಮೊಬೈಲ್ ನಿಂದ ಕರೆ ಮಾಡಿ ವಿನಾಕಾರಣ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿದ್ದ. ಈ ಬಗ್ಗೆ ಪ್ರಶಾಂತ್ ಪೂಂಜಾ ಅವರು ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಿದ್ದರು. ದೂರನ್ನು ಠಾಣಾ ಎನ್ ಸಿ ಆರ್ ನಂಬರ್ 88/2022 ರಂತೆ ನೊಂದಾಯಿಸಿಕೊಂಡು ಇದೊಂದು ಅಸಂಜ್ಞೆಯ ಅಪರಾಧವಾಗಿರುವುದರಿಂದ ನ್ಯಾಯಾಲಯಕ್ಕೆಕಲಂ : 504, 506 ಐ ಪಿ ಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳುವ ಅನುಮತಿ ನೀಡುವಂತೆ ಕೋರಿಕೆ ಬೆಳ್ಳಾರೆ ಪೊಲೀಸರು
ಪತ್ರ ಸಲ್ಲಿಸಿದ್ದರು. ನ್ಯಾಯಾಲಯದ ಅನುಮತಿಯಂತೆ ಆರೋಪಿ ಅಬ್ದುಲ್ ಸಪ್ರೀತ್ ಯಾನೆ ಅಬ್ದುಲ್ ಸಫ್ರಿಜ್ ಎಂಬಾತನ ವಿರುದ್ಧ ಕಲಂ : 504, 506 ಐ ಪಿ ಸಿ ಯಂತೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.