UDUPI : ಪತ್ನಿ ಅಗಲಿದ ಮರುದಿನ ಪತಿಯೂ ನಿಧನ
Sunday, September 11, 2022
ಪತ್ನಿ ಅಗಲಿದ ಮರುದಿನ ಪತಿಯೂ ನಿಧನ ಹೊಂದಿದ ಘಟನೆ ಉಡುಪಿ ಜಿಲ್ಲೆಯ ಹೆಬ್ರಿ ಸಂತೆಕಟ್ಟೆಯಲ್ಲಿ ನಡೆದಿದೆ. ಹೆಬ್ರಿ ಸಂತೆಕಟ್ಟೆ ನಿವಾಸಿ, ಹಿರಿಯ ಉದ್ಯಮಿ ಜ್ಞಾನದೇವ ಕಾಮತ್ ಸಂತೆಕಟ್ಟೆ (80) ಅವರು ಸೆ. 10ರಂದು ನಿಧನ ಹೊಂದಿದರು.
ಅವರ ಪತ್ನಿ ಸುಲತಾ ಕಾಮತ್ (76) ಅವರು ಸೆ. 9ರಂದು ನಿಧನ ಹೊಂದಿದ್ದರು. ಉದ್ಯಮಿ ಜ್ಞಾನದೇವ ಕಾಮತ್
ವಿವಿಧ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು. ಸುಮಾರು 30 ವರ್ಷಕ್ಕೂ ಹೆಚ್ಚು ಕಾಲ “ಉದಯವಾಣಿ’ ಪತ್ರಿಕೆಯ ವಿತರಕರಾಗಿ, ಕೊಡುಗೈ ದಾನಿಯಾಗಿದ್ದರು. ಮೃತರು ಪುತ್ರ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ