UDUPI : ಕೊಲ್ಲೂರು ದೇವಸ್ಥಾನದ ಸೌಪರ್ಣಿಕಾ ನದಿಯಲ್ಲಿ ಮಹಿಳೆ ನೀರುಪಾಲು
Sunday, September 11, 2022
ಕೇರಳದ ತಿರುವನಂತಪುರದಿಂದ ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಕುಟುಂಬ ಸಮೇತವಾಗಿ ಆಗಮಿಸಿದ ಮಹಿಳೆಯೋರ್ವರು ಸೌಪರ್ಣಿಕಾ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ. ಚಾಂದಿ ಶೇಖರನ್ (42) ನೀರುಪಾಲಾದ ಮಹಿಳೆ.
ಕೇರಳದ ತಿರುವನಂತಪುರದಿಂದ 14 ಮಂದಿಯ ತಂಡ ಕೊಲ್ಲೂರು ಕ್ಷೇತ್ರಕ್ಕೆ ಆಗಮಿಸಿದ್ದು, ಪಕ್ಕದಲ್ಲೇ ಇರುವ ಸೌಪರ್ಣಿಕಾ ನದಿಯಲ್ಲಿ ತೀರ್ಥ ಸ್ನಾನಕ್ಕೆಂದು ನದಿಗೆ ಇಳಿದಿದ್ದರು. ಈ ಸಂದರ್ಭ ಮುರುಗನ್ ಮತ್ತು ಪುತ್ರ ಆದಿತ್ಯ ನದಿಯ ಸೆಳೆತಕ್ಕೆ ಒಳಗಾದರೂ ಈಜಿ ದಡ ಸೇರಿದರು.
ಆದ್ರೆ, ಮುರುಗನ್ ಅವರ ಪತ್ನಿ ಚಾಂದಿ ಶೇಖರನ್, ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದಾರೆ. ಮಹಿಳೆಗಾಗಿ ಅಗ್ನಿ ಶಾಮಕ ದಳ, ಕೊಲ್ಲೂರು ಪೊಲೀಸರು ಹಾಗು ಗ್ರಾಮಸ್ಥರು ಶೋಧ ಕಾರ್ಯ ನಡೆಸುತ್ತಿದಾರೆ. ನದಿ ನೀರಿನ ಸೆಳೆತ ಹೆಚ್ಚಾಗಿದ್ದು, ಅಪಕಾಯಕಾರಿ ಎಂದು ಎಚ್ಚರಿಕೆ ನೀಡಿದ್ದರೂ, ಸ್ನಾನಕ್ಕೆ ತೆರಳಿದ್ದರು ಎನ್ನಲಾಗಿದೆ.