
UDUPI : ಇಸ್ಪೀಟ್ ಜುಗಾರಿ ಆಟ ; ನಾಲ್ವರು ಪೊಲೀಸ್ ವಶಕ್ಕೆ
ಉಡುಪಿ ಜಿಲ್ಲೆಯ ನಿಟ್ಟೆಯ ಕೆಮ್ಮಣ್ಣು ಡ್ಯಾಮ್ ಬಳಿಯ ಪಾಳು ಬಿದ್ದ ಹಳೆಯ ಕೆ.ಪಿ.ಟಿ.ಸಿ.ಎಲ್. ಕಟ್ಟಡದಲ್ಲಿ ಇಸ್ಪೀಟ್ ಜುಗಾರಿ ಆಡುತ್ತಿದ್ದ ನಾಲ್ವರನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜುಗಾರಿ ಆಡುವ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸರಿಗೆ ಸಿಕ್ಕಿದ ಖಚಿತ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿತ್ತು.
ಪ್ರಥಮ್ ಶೆಟ್ಟಿ (29), ಸಂದೀಪ (29), ಗುರುಪ್ರಸಾದ್ (23) ಮತ್ತು ರಾಜೇಶ್ ಪೂಜಾರಿ (30) ವಶಕ್ಕೆ ಪಡೆದವರು. ಸ್ಥಳದಲ್ಲಿದ್ದ 1360 ರೂ. ನಗದು, ಇಸ್ಪೀಟ್ ಎಲೆಗಳು, ನೆಲಕ್ಕೆ ಹಾಸಿದ ಬ್ಯಾನರ್-1, ಮತ್ತು ಇಸ್ಪೀಟ್ ಕಾರ್ಡ್‌ನ ಸ್ಯಾಚೆಟ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.