UDUPI : ಬಸ್ಸಿನಲ್ಲಿ ಅಜ್ಜನ ಭರ್ಜರಿ ಸ್ಟೆಪ್
Friday, September 30, 2022
ಕರಾವಳಿಯಲ್ಲಿ ಸಂಚರಿಸುವ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರಿಗೆ ಬೋರ್ ಹೊಡೆಯದೇ ಇರ್ಲಿ ಅಂತ ಸಾಂಗ್ ಪ್ಲೇ ಮಾಡೋದು ಕಾಮನ್. ಹೆಚ್ಚಾಗಿ ಹಳೆ ಸಾಂಗ್ ಹಾಕೋದು ಮಾಮೂಲು. ಹಳೆಯ ಹಾಡನ್ನು ಆಶ್ವಾದಿಸುತ್ತಾ, ಹೆಜ್ಕೆ ಹಾಕಬೇಕು ಅಂತ ಪ್ರಯಾಣಿಕರಿಗೆ ಮನಸಾದ್ರೂ, ಯಾರು ಡ್ಯಾನ್ಸ್ ಮಾಡಲ್ಲ. ಆದ್ರೆ ವಯೋವೃದ್ದರೊಬ್ಬರು ಹಳೆಯ ಹಿಂದಿ ಸಾಂಗ್‌ಗೆ ಸಖತ್ ಸ್ಟೆಪ್ ಹಾಕಿದ್ದಾರೆ.
ಅಜ್ಜನ ಡ್ಯಾನ್ಸ್ ವಿಡಿಯೋ ಕರಾವಳಿಯಲ್ಲಿ ಬಾರೀ ವೈರಲ್ ಆಗಿದೆ. ಉಡುಪಿಯಿಂದ ಹೂಡೆಗೆ ತೆರಳುವ HMT ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೃದ್ದರೊಬ್ಬರು, ಹಳೆ ಹಾಡನ್ನು ಕೇಳಿ ಖುಷಿಯಿಂದ ಹೆಜ್ಜೆಹಾಕಿದ್ದು, ಇದರ ವಿಡಿಯೊವನ್ನು ಪ್ರಯಾಣಿಕರೊಬ್ಬರು ಮೊಬೈಲ್‌ನಲ್ಲಿ ಚಿತ್ರೀಕರಿಸಿ ವೈರಲ್ ಮಾಡಿದ್ದಾರೆ.
ಸದ್ಯ ಈ ವಿಡಿಯೋ ಬಾರೀ ವೈರಲ್ ಆಗಿ ಅಜ್ಜನ ಡ್ಯಾನ್ಸ್ ಉತ್ಸವ ಕಂಡು ಜನ ವಾವ್ ಅಂದಿದ್ದಾರೆ.