ಯುವಕನಿಗೆ ಡೇಟಿಂಗ್ ಗೆ ಯುಪಿಐ ಮೂಲಕ ಹಣ ನೀಡಿದ ಕ್ರಿಕೆಟಿಗ ಅಮಿತ್ ಮಿಶ್ರಾ
Friday, September 30, 2022
ನವದೆಹಲಿ: ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯರಾಗಿರುವ ಇಂಡಿಯಾದ ಸ್ಪಿನ್ನರ್ ಅಮಿತ್ ಮಿಶ್ರಾ ಅವರು ಯುವಕನೋರ್ವನಿಗೆ ಡೇಟಿಂಗ್ ಗೆಂದು ಯುಪಿಐ ಮೂಲಕ ಹಣ ಸಹಾಯ ಮಾಡುವ ಮೂಲಕ ಭಾರೀ ಸುದ್ದಿಯಲ್ಲಿದ್ದಾರೆ.
ಆದಿತ್ಯ ಕುಮಾರ್ ಸಿಂಗ್ ಎಂಬ ಯುವಕ ತನ್ನ ಗರ್ಲ್‌ಫ್ರೆಂಡ್ ಜತೆ ಡೇಟಿಂಗ್‌ಗೆ ಹೋಗಲು 300 ರೂ. ನೀಡುವಂತೆ ಟ್ವಿಟರ್‌ನಲ್ಲಿ ಅಮಿತ್ ಮಿಶ್ರಾಗೆ ಬೇಡಿಕೆ ಇಟ್ಟಿದ್ದನು. ಜೊತೆಗೆ ತನ್ನ ಯುಪಿಐ ಐಡಿಯನ್ನೂ ಹಂಚಿಕೊಂಡಿದ್ದ. ಅಮಿತ್ ಮಿಶ್ರಾ ಇದನ್ನು ಕಡೆಗಣಿಸಬಹುದು ಎಂದೇ ಎಲ್ಲರೂ ಎಣಿಸಿಕೊಂಡಿದ್ದರು.
ಆದರೆ, 300 ರೂ.ಗೆ ಬದಲಾಗಿ 500 ರೂ.ಗಳನ್ನೇ ಯುಪಿಐ ಮಾಡಿರುವ ಸ್ಟೀನ್‌ಶಾಟ್ ಜತೆಗೆ ಮಿಶ್ರಾ, ನೀವು ಕೇಳಿರುವ ಹಣ ಪಾವತಿಯಾಗಿದೆ. ನಿಮ್ಮ ಡೇಟ್‌ಗೆ ಶುಭಾಶಯಗಳು' ಎಂದು ಪ್ರತಿಕ್ರಿಯಿಸಿದ್ದಾರೆ . ಇದಕ್ಕೆ ಪ್ರತಿಯಾಗಿ ಆದಿತ್ಯ , 'ನಿಮ್ಮ ಉಡುಗೊರೆಗೆ ಧನ್ಯವಾದಗಳು ಸರ್ , ಲವ್ ಯೂ ' ಎಂದು ಅಮಿತ್ ಮಿಶ್ರಾಗೆ ಆದಿತ್ಯ ಕುಮಾರ್ ಸಿಂಗ್ ಕೃತಜ್ಞತೆ ತಿಳಿಸಿದ್ದಾನೆ.