-->
UDUPI : ಕಡವೆ ಬೇಟೆ  ; ಇಬ್ಬರ ಬಂಧನ

UDUPI : ಕಡವೆ ಬೇಟೆ ; ಇಬ್ಬರ ಬಂಧನ

ಕಡವೆ ಬೇಟೆಯಾಡಿ ಮಾಂಸ ಮಾಡಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ ಘಟನೆ ಉಡುಪಿಯ ಬೈಂದೂರಿನಲ್ಲಿ ನಡೆದಿದೆ. ಮೊಹಮ್ಮದ್ ನಝೀರ್ (20), ಅಬ್ದುಲ್ ಅಲಿ (23) ಬಂಧಿತರು. ಬೈಂದೂರು ತಾಲೂಕಿನ ಒತ್ತಿನೆಣೆ ಪರಿಸರದಲ್ಲಿ ಕಡವೆ ಬೇಟೆ ಆಡುತ್ತಿರುವ  ಸ್ಥಳಕ್ಕೆ ಪೊಲೀಸರು, ದಾಳಿ ಮಾಡಿದಾಗ, ಸ್ಥಳದಲ್ಲಿ ಯಾರೂ ಇರಲಿಲ್ಲ.
 ಬೇಟಿಯಾಡಿದ ಕುರುಹುಗಳ ಇತ್ತು.‌ಹೀಗಾಗಿ ನಾಕಾಬಂದಿ ಮಾಡಿ, ಸಂಶಯಾಸ್ಪದವಾಗಿ ಸ್ಕೂಟಿಯಲ್ಲಿ ಸಂಚರಿಸುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ 20 ಕೆ.ಜಿ ಕಡವೆ ಮಾಂಸ ಸಾಗಾಟ ಮಾಡುತ್ತಿದ್ದುದು ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಹೆಚ್ಚಿನ ವಿಚಾರಣೆಗೆ ಆರೋಪಿಗಳನ್ನು ಒಂದು ದಿನ ವಲಯ ಅರಣ್ಯ ಇಲಾಖೆಯ ವಶಕ್ಕೆ ನೀಡಲಾಗಿದೆ. ಬೈಂದೂರು ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article