UDUPI : ಕುಡಿತ ಮತ್ತಿನಲ್ಲಿ ಯುವಕ ಯುವತಿಯರ ಹುಚ್ಚಾಟ ; ಒಬ್ಬನಿಗೆ ಗಾಯ, ಎರಡು ಕಾರುಗಳು ಜಖಂ
Sunday, September 4, 2022
ಕುಡಿದ ಮತ್ತಿನಲ್ಲಿ ಯುವಕನೊಬ್ಬ ಕಾರನ್ನು ಎರ್ರಾಬಿರ್ರಿ ಚಲಾಯಿಸಿ ನಿಲ್ಲಿಸಿದ್ದ ಕಾರನ್ನು ಜಖಂಗೊಳಿಸಿದ ಘಟನೆ ಉಡುಪಿಯ ಮಣಿಪಾಲದಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ನಿನ್ನೆ ರಾತ್ರಿ ಮಣಿಪಾಲದ ಪಬ್‌ಗೆ ಬಂದಿದ್ದ, ಬೆಂಗಳೂರು ಮತ್ತು ಶಿವಮೊಗ್ರದ ಮೂಲದ ನಾಲ್ಕು ಮಂದಿ ಯುವಕರು ಹಾಗೂ ಇಬ್ಬರು ಯುವತಿಯರು, ತಮ್ಮ ಕಾರಿನಲ್ಲಿ ಹಿಂದಿರುಗುವಾಗ ನಶೆಯಲ್ಲಿ ಎರ್ರಾಬಿರ್ರಿ ಕಾರು ಚಲಾಯಿಸಿದ ಪರಿಣಾಮ, ಪಬ್ ನೌಕರ ವಿಕ್ರಾಂತ್ ಎಂಬುವವರ ಕಾಲಿಗೆ ಗಾಯ ಉಂಟು ಮಾಡಿ ಪಾರ್ಕಿಂಗ್‌ನಲಿದ್ದ ವಾಹನಗಳನ್ನು ಜಖಂ ಮಾಡಿದ್ದಾರೆ.