-->
ನಾಳೆ ( ಸೆ.4)  ಬಿ ಜಿ ಮೋಹನ್ ದಾಸ್ ಪ್ರಶಸ್ತಿ ಪ್ರದಾನ - ತಮಗೆಲ್ಲರಿಗೂ ಪ್ರೀತಿಯ ಸ್ವಾಗತ

ನಾಳೆ ( ಸೆ.4) ಬಿ ಜಿ ಮೋಹನ್ ದಾಸ್ ಪ್ರಶಸ್ತಿ ಪ್ರದಾನ - ತಮಗೆಲ್ಲರಿಗೂ ಪ್ರೀತಿಯ ಸ್ವಾಗತ

ಮಂಗಳೂರು: gulfkannadiga.com ಸ್ಥಾಪಕ ದಿವಂಗತ ಬಿ ಜಿ ಮೋಹನ್ ದಾಸ್ ಅವರ ನೆನಪಿನಲ್ಲಿ  ಅತ್ಯುತ್ತಮ ಡಿಜಿಟಲ್ ಮಾಧ್ಯಮ ವರದಿಗೆ ನೀಡಲಾಗುವ ಬಿ ಜಿ ಮೋಹನ್ ದಾಸ್ ಪ್ರಶಸ್ತಿ ನಾಳೆ ಪ್ರದಾನವಾಗಲಿದೆ.

ಬಂಟ್ವಾಳ ತಾಲೂಕಿನ ತುಂಬೆ ಕಡೆಗೋಳಿ ಯ ನಿರತ ಸಾಹಿತ್ಯ ಸಂಪದ ಮತ್ತು ಗಲ್ಫ್ ಕನ್ನಡಿಗ. ಕಾಮ್  ನೇತೃತ್ವದಲ್ಲಿ ಈ ಪ್ರಶಸ್ತಿ ಯನ್ನು ಪ್ರದಾನ ಮಾಡಲಾಗುತ್ತಿದೆ. 2022 ರಲ್ಲಿ ನೀಡಲಾಗುವ ಎರಡನೇ ವರ್ಷದ ಬಿ ಜಿ ಮೋಹನ್ ದಾಸ್ ಪ್ರಶಸ್ತಿಗೆ ಈ ಬಾರಿ ವಾರ್ತಾಭಾರತಿ ಪತ್ರಿಕೆಯ ಪತ್ರಕರ್ತ  ಸಂಶುದ್ದೀನ್ ಎಣ್ಮೂರು ಆಯ್ಕೆಯಾಗಿದ್ದಾರೆ.


ನಾಳೆ ಬಂಟ್ವಾಳ ತಾಲೂಕಿನ ಬಿ ಸಿ ರೋಡ್ ನ ಕೈಕುಂಜೆಯಲ್ಲಿರುವ ಕನ್ನಡ ಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಬೆಳಿಗ್ಗೆ 9.30 ಕ್ಕೆ ಜಯರಾಮ ಪಡ್ರೆ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದ್ದು, ಬೆಳಿಗ್ಗೆ 11 ಗಂಟೆಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ನಿರತ ಸಾಹಿತ್ಯ ಸಂಪದ ಬ್ರಿಜೆಷ್ ಅಂಚನ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಂಟ್ವಾಳ ತಾಲೂಕು ಕಸಾಪ ಅಧ್ಯಕ್ಷ ವಿಶ್ವನಾಥ್ ಬಂಟ್ವಾಳ,ದಿವಂಗತ ಬಿ ಜಿ ಮೋಹನ್ ದಾಸ್  ಸಹೋದರ,ಉಡುಪಿ ಜಿಲ್ಲಾ ಚೇಂಬರ್ ಅಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಯ ಜಂಟಿ ಕಾರ್ಯದರ್ಶಿ ಬಿ ಜಿ ಲಕ್ಷ್ಮೀಕಾಂತ್ ಬೆಸ್ಕೂರು, ಮಂಗಳೂರಿನ ವಕೀಲ ಸುಕೇಶ್ ಕುಮಾರ್ ಶೆಟ್ಟಿ, ಪಾಣೆಮಂಗಳೂರು ಶಾರದಾ ಪ್ರೌಢಶಾಲೆಯ ಸಹಶಿಕ್ಷಕಿ ಸುಧಾ ನಾಗೇಶ್ ಉಪಸ್ಥಿತರಿರಲಿದ್ದಾರೆ.

ಕವಿಗೋಷ್ಠಿಯಲ್ಲಿ ಭಾಗವಹಿಸುವ ಕವಿಗಳು: ಡಾ | ಮೈತ್ರಿ ಭಟ್,  ಮಹೇಂದ್ರನಾಥ್ ಸಾಲೆತ್ತೂರು , ತುಳಸಿ ಕೈರಂಗಳ್ , ಸುಹಾನ ಸೈಯ್ಯದ್ , ದೀಪ್ತಿ ಪಿ,  ಫಾತಿಮಾ ಪರ್ವೀನ್, ಶಶಿಕಲಾ ಭಾಸ್ಕರ್,  ನಳಿನಿ ಬಿ ರೈ ಮಂಚಿ,ವಿಶ್ವನಾಥ್ ಕುಲಾಲ್ ಮಿತ್ತೂರು , ಆಶೋಕ್ ಎನ್ ಕಡೇಶ್ವಾಲ್ಯ ,ಖತೀಜತುಲ್ ನಝೀಲ,  ಸಂಧ್ಯಾ ಕುಮಾರಿ ಎಸ್ , ಮಹಿಮಾ ಆರ್ ಕೆ, ನಂದಿತಾ ವಿಟ್ಲ ,ಜಯಲಕ್ಷ್ಮೀ ಜಿ ಕುಂಪಲ.

ಬಿ ಸಿ ರೋಡ್ ನ ಕನ್ನಡ ಭವನದಲ್ಲಿ ನಡೆಯುವ ಕವಿಗೋಷ್ಠಿ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರು,ಸಾರ್ವಜನಿಕರು ಭಾಗವಹಿಸುವಂತೆ ನಿರತ ಸಾಹಿತ್ಯ ಸಂಪದದ ಪ್ರಕಟನೆ ತಿಳಿಸಿದೆ.

Ads on article

Advertise in articles 1

advertising articles 2

Advertise under the article