-->
ಹುಬ್ಬಳ್ಳಿ: ಪತ್ನಿಯ ಸಂಬಂಧಿಕರಿಂದಲೇ ಹತ್ಯೆಯಾಗಿದ್ದ ಗ್ರಾಪಂ ಸದಸ್ಯನ ಪತ್ನಿಯೂ ಶಂಕಾಸ್ಪದ ರೀತಿಯಲ್ಲಿ ಆತ್ಮಹತ್ಯೆಗೆ ಶರಣು

ಹುಬ್ಬಳ್ಳಿ: ಪತ್ನಿಯ ಸಂಬಂಧಿಕರಿಂದಲೇ ಹತ್ಯೆಯಾಗಿದ್ದ ಗ್ರಾಪಂ ಸದಸ್ಯನ ಪತ್ನಿಯೂ ಶಂಕಾಸ್ಪದ ರೀತಿಯಲ್ಲಿ ಆತ್ಮಹತ್ಯೆಗೆ ಶರಣು

ಹುಬ್ಬಳ್ಳಿ: ಪತ್ನಿಯ ಸಂಬಂಧಿಗಳಿಂದಲೇ ಭೀಕರವಾಗಿ ಹತ್ಯೆಯಾಗಿದ್ದ ಗಂಗಿವಾಳ ಗ್ರಾಪಂ ಸದಸ್ಯ ದೀಪಕ ಪಟದಾರಿ ಅವರ ಪತ್ನಿ ಪುಷ್ಪಾ ಪಟದಾರಿ ಬುಧವಾರ ರಾತ್ರಿ  ಹುಬ್ಬಳ್ಳಿಯ ನವನಗರದ ಸಿಟಿ ಪಾರ್ಕ್ ನ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಆತ್ಮಹತ್ಯೆಗೆ ಶರಣಾಗಿರುವ ತಾಲೂಕಿನ ರಾಯನಾಳದ ಪುಷ್ಪಾ ಗಂಗಿವಾಳದ ದೀಪಕರನ್ನು ಕುಟುಂಬದವರ ತೀವ್ರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಪುಷ್ಪಾ ಪಟದಾರಿಯವರ ಮನೆಯವರಿಂದಲೇ ದೀಪಕ ಪಟದಾರಿಯವರ ಹತ್ಯೆಯಾಗಿತ್ತು. ಇದೀಗ ಪುಷ್ಪಾ ಆತ್ಮಹತ್ಯೆ ಮಾಡಿಕೊಂಡಿದ್ದು, ನಿಖರ ಕಾರಣ ತಿಳಿದು ಬಂದಿಲ್ಲ. ಎಪಿಎಂಸಿ-ನವನಗರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಸರಕಾರ ದೀಪಕ ಕೊಲೆ ಪ್ರಕರಣವನ್ನು ಪತ್ನಿ ಹಾಗೂ ಅವರ ಕುಟುಂಬದ ಸದಸ್ಯರ ಒತ್ತಾಯದ ಮೇರೆಗೆ 3-4 ದಿನಗಳ ಹಿಂದೆಯಷ್ಟೇ ಸಿಐಡಿಗೆ ವಹಿಸಿ ಆದೇಶಿಸಿತ್ತು. ಆರು ಜನರುಳ್ಳ ತಂಡ ಪ್ರಕರಣದ ಕುರಿತು ತನಿಖೆ ನಡೆಸಿತ್ತು. ಅಷ್ಟರಲ್ಲಿಯೇ ದೀಪಕನ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದು ಹಲವು ಸಂಶಯಗಳಿಗೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99