-->
ತಲೆಗೆ ಹಾಕಿರುವ ಸ್ಕಾರ್ಫ್ ಕಿತ್ತೊಗೆದು ಹಿಜಾಬ್ ವಿರುದ್ಧ ಪ್ರತಿಭಟಿಸಿದ ಯುವತಿಯ ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು

ತಲೆಗೆ ಹಾಕಿರುವ ಸ್ಕಾರ್ಫ್ ಕಿತ್ತೊಗೆದು ಹಿಜಾಬ್ ವಿರುದ್ಧ ಪ್ರತಿಭಟಿಸಿದ ಯುವತಿಯ ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು


ಟೆಹರಾನ್: ಹಿಜಾಬ್‌ ವಿರುದ್ಧ ಇತ್ತೀಚೆಗೆ ಇರಾನ್‌ನಲ್ಲಿ ನಡೆದಿರುವ ಪ್ರತಿಭಟನೆಯ ವೇಳೆ ತಲೆಗೆ ಧರಿಸಿರುವ ಸ್ಕಾರ್ಫ್ ಅನ್ನು ಕಿತ್ತೊಗೆದು ಬೆಂಬಲ ವ್ಯಕ್ತಪಡಿಸಿದ್ದ ಹದೀಸ್‌ ನದಾಫಿ ಎಂಬ ಯುವತಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಕೆಲ ದಿನಗಳ ಹಿಂದೆ, ಹಿಜಾಬ್‌ ಸರಿಯಾಗಿ ಧರಿಸದಿರುವ ಕಾರಣಕ್ಕೆ ಮೆಹ್ಸಾ ಅಮಿನಿ ಎಂಬ ಯುವತಿಯನ್ನು ಇರಾನ್‌ ಪೊಲೀಸರು ಬಂಧಿಸಿದ್ದರು. ಈಕೆ ಪೊಲೀಸರ ವಶದಲ್ಲಿರುವಾಗಲೇ ಮೃತಪಟ್ಟಿದ್ದಳು. ಪೊಲೀಸರ ಈ ನೈತಿಕಗಿರಿಯನ್ನು ಖಂಡಿಸಿ ಇರಾನ್‌, ಸಿರಿಯಾ, ಇಂಗ್ಲೆಂಡ್‌ ಸೇರಿದಂತೆ ಹಲವು ದೇಶಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಇದೇ ರೀತಿ ಟೆಹರಾನ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ಸ್ಕಾರ್ಫ್ ಕಿತ್ತೆಸೆದ ಹದೀಸ್‌ ನದಾಫಿ ಪೋಟೋ ಎಲ್ಲೆಡೆ ವೈರಲ್‌ ಆಗಿತ್ತು.

ಈ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಮಂಗಳವಾರ ಹದೀಸ್‌ ಮೇಲೆ ಆರು ಸುತ್ತು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಇನ್ನೊಂದೆಡೆ, ಹಿಜಾಬ್‌ ವಿರುದ್ಧದ ಪ್ರತಿಭಟನೆ ಬೆಂಬಲಿಸಿ ಟರ್ಕಿ ದೇಶದ ಗಾಯಕಿ ಮೆಲೆಕ್‌ ವೇದಿಕೆಯಲ್ಲೇ ಕೂದಲು ಕತ್ತರಿಸಿಕೊಂಡಿದ್ದಾರೆ. 'ಮಹಿಳೆಯರು ತಮ್ಮದೇ ಸ್ವಾತಂತ್ರ್ಯ ಹೊಂದಿದ್ದಾರೆ. ಅವರ ಮೇಲೆ ಹೇರಿಕೆ ಸಲ್ಲದು' ಎಂದು ಗಾಯಕಿ ಪ್ರತಿಪಾದಿಸಿದ್ದಾರೆ.

Ads on article

Advertise in articles 1

advertising articles 2

Advertise under the article