
ಬೆಂಗಳೂರು: ಬುದ್ಧಿಮಾತು ಹೇಳಿದ್ದಕ್ಕೆ ತಂದೆಯ ಮರ್ಮಾಂಗಕ್ಕೆ ಹೊಡೆದು ಕೊಂದ ಪಾಪಿ ಪುತ್ರ
Sunday, September 25, 2022
ಬೆಂಗಳೂರು: ಬುದ್ಧಿಮಾತು ಹೇಳಿದ್ದಕ್ಕೆ ಪಾಪಿ ಪುತ್ರನೋರ್ವನು ತಂದೆಯ ಮರ್ಮಾಂಗಕ್ಕೆ ಹೊಡೆದು ಕೊಂದ ಪ್ರಕರಣವೊಂದು ರಾಜಧಾನಿ ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಚನ್ನಬಸವರಾಜು (56) ಕೊಲೆಯಾದ ದುರ್ದೈವಿ. ಪುತ್ರ ರಾಕೇಶ್ ಕೊಲೆಗೈದಿರುವ ಆರೋಪಿ.
ತಂದೆ - ಮಗ ಇಬ್ಬರೂ ಹೊಲದಲ್ಲಿ ಜೊತೆಗೆ ಕೆಲಸ ಮಾಡುತ್ತಿದ್ದರು. ಇಬ್ಬರೂ ಜೊತೆಯಾಗಿ ಕೆಲಸದ ವೇಳೆ ತಂದೆ ಚನ್ನಬಸವರಾಜು ಮಗನಿಗೆ ಬುದ್ಧಿಮಾತು ಹೇಳಿದ್ದರು. ಪರಿಣಾಮ ಸಿಟ್ಟಿಗೆದ್ದ ರಾಕೇಶ್ ಕೈಯಲ್ಲಿದ್ದ ಸಲಾಕೆಯಿಂದ ತಂದೆಯ ಮರ್ಮಾಂಗಕ್ಕೆ ಹೊಡೆದಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡ ತಂದೆ ಚೆನ್ನಬಸವರಾಜು ಸಾವಿಗೀಡಾಗಿದ್ದಾರೆ.
ಆರೋಪಿ ಪುತ್ರನನ್ನು ಬಂಧಿಸಿರುವ ಪೊಲೀಸರು , ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾ ಕಾಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.