ಬಳ್ಳಾರಿ: ಬಹಿರ್ದೆಸೆಗೆಂದು ತೆರಳಿದ ಯುವತಿಯರು ರೈಲು ಢಿಕ್ಕಿ ಹೊಡೆದು ಮೃತ್ಯು
Monday, September 26, 2022
ಬಳ್ಳಾರಿ: ಬಹಿರ್ದೆಸೆಗೆಂದು ತೆರಳಿದ್ದ ಯುವತಿಯರಿಬ್ಬರು ರೈಲಿನಡಿಗೆ ಸಿಲುಕಿ ಮೃತಪಟ್ಟ ದಾರುಣ ಘಟನೆಯೊಂದು ಬಳ್ಳಾರಿ ತಾಲೂಕಿನ ತೆಗ್ಗಿನ ಬೂದಿಹಾಳ್ ಗ್ರಾಮದಲ್ಲಿ ಸಂಭವಿಸಿದೆ.
ಬಳ್ಳಾರಿ ನಿವಾಸಿಗಳಾದ ಪ್ರಭಾವತಿ (16), ಸ್ವಾತಿ ಮೃತಪಟ್ಟ ಯುವತಿಯರರು.
ಬಹಿರ್ದೆಸೆಗೆಂದು ತೆರಳಿದ್ದ ಇವರು ಹಳಿ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ರೈಲು ಢಿಕ್ಕಿ ಹೊಡೆದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸಾವಿಗೀಡಾದ ಮಹಿಳೆಯರ ಕುರಿತ ಹೆಚ್ಚಿನ ಮಾಹಿತಿ ಇನ್ನೂ ಖಚಿತವಾಗಿ ಹೊರಬಿದ್ದಿಲ್ಲ. ಬಳ್ಳಾರಿ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅವಘಡ ಸಂಭವಿಸಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.