
Kerala : ಕೇರಳದಲ್ಲಿ ಲಾಟರಿ ಗೆದ್ದು ಸುದ್ದಿಯಾದ ಯುವಕನಿಗೆ ಈಗ ಗೆಲುವೇ ಮುಳುವಾಗಿದೆ ಯಾಕೆ ಗೊತ್ತಾ..?
ಓಣಂ ಬಂಪರ್ ಲಾಟರಿಯಲ್ಲಿ 25 ಕೋಟಿ ಗೆದ್ದು ದೇಶಾದ್ಯಂತ ಸುದ್ದಿಯಾದ ಕೇರಳದ ಆಟೊಚಾಲಕ ಅನೂಫ್ ಈಗ ಲಾಟರಿ ಯಾಕಪ್ಪ ಗೆದ್ದೆ ಅನ್ನುವಷ್ಟು ಬೇಸರ ಪಟ್ಟುಕೊಂಡಿದ್ದಾನಂತೆ..? 25 ಕೋಟಿ ಮೇಲೆ ಈತನಿಗೆ ಬೇಸರಕ್ಕೆ ನಿಜವಾದ ಕಾರಣ ಕೇಳಿದ್ರೆ ನಿಮಗೂ ದಂಗಾಗುತ್ತೆ.
ಮಗನಿಗೆ ಹುಷಾರಿಲ್ಲ. ನನಗೆ ಆತನ ಜೊತೆ ಇರಲು ಆಗ್ತಿಲ್ಲ. ಲಾಟರಿಯನ್ನು ಗೆದ್ದಾಗ ನನಗೆ ಭಾರಿ ಸಂತೋಷವಾಗಿತ್ತು. ಆದರೆ ಈಗ, ಯಾಕಾದರೂ ಗೆದ್ದೆನೊ ಎನ್ನಿಸುತ್ತಿದೆ ಅಂತ ವಿಡಿಯೋ ಮಾಡಿ ಬೇಸರ ಪಟ್ಟುಕೊಂಡಿದ್ದಾರೆ.
ಅನೂಪ್ ಅವರ ಮನೆ ಮುಂದೆ ಧನ ಸಹಾಯ ಕೇಳಿ ಬರುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, ಇದರಿಂದ ಬೇಸತ್ತಿರುವ ಅನೂಪ್ ಮನೆ ಬಿಟ್ಟು, ಸಹೋದರಿಯ ಮನೆಯಲ್ಲಿ, ಸ್ನೇಹಿತರ ಮನೆಯಲ್ಲಿ ಉಳಿಯುವ ಪರಿಸ್ಥಿತಿಗೆ ಬಂದಿದ್ದಾರಂತೆ.
ನನಗೆ ಇನ್ನೂ ಹಣ ಬಂದಿಲ್ಲ ಎಂದು ಹೇಳಿದರೆ ಯಾರೂ ನಂಬುತ್ತಿಲ್ಲ. ನಾನು ಈಗ ಇರುವ ಮನೆಯನ್ನು ಬದಲಾಯಿಸಬೇಕು ಎಂದಿದ್ದೇನೆ ಅಂತ ಹೇಳಿದ್ದಾರೆ. ಮಗನಿಗೆ ಆರೋಗ್ಯ ಸರಿಯಿಲ್ಲ. ಆತನ ಹೆಂಡತಿ ಬಸುರಿ, ಆದರೂ ಆತನಿಗೆ ಕುಟುಂಬದೊಂದಿಗೆ ಸಮಯ ಕಳೆಯಲು ಲಾಟರಿ ಗೆಲುವೇ ಮುಳುವಾಗುತ್ತಿದೆ ಅಂತ ಆನೂಫ್ ಬೇಸರ ಪಟ್ಟುಕೊಂಡಿದ್ದಾರೆ..