
cinema : ರಾಕಿ ಭಾಯಿ ಯಶ್ ಗನ್ ಹಿಡಿದು ಹೇಗೆ ಶೂಟ್ ಮಾಡ್ತಾರೆ ನೋಡಿ..!
Kgf 2 ವಿಶ್ವದಲ್ಲೇ ಬಾರೀ ಸದ್ದು ಮಾಡಿದ ಬಳಿಕ ಯಶ್ ಮುಂದಿನ ಸಿನಿಮಾ ಯಾವುದು ಅಂತ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.
ಸದ್ಯ ಯಶ್ ಹಾಲಿವುಡ್ನ ನಿರ್ದೇಶಕನ ಜತೆ ಯಶ್ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಯಶ್ ಮುಂದಿನ ಚಿತ್ರ ಹಾಲಿವುಡ್ ನಲ್ಲಾ ಅಂತ ಚರ್ಚೆ ಶುರು ಮಾಡಿದ್ದಾರೆ.
ಹಾಲಿವುಡ್ ನಟ, ನಿರ್ದೇಶಕ ಜೆಜೆ ಪೆರ್ರಿ ಅವರನ್ನು ಭೇಟಿ ಮಾಡಿದ ಯಶ್, ಅಮೆರಿಕದ Taran Tactical Innovations ಜಾಗಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ಜೆರ್ರಿ ಜತೆ ಸೇರಿ ಗನ್ ಹಿಡಿದು ಶೂಟಿಂಗ್ ಕೂಡ ಮಾಡಿದ್ದು, ಈ ವಿಡಿಯೋವನ್ನು ಯಶ್ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ವಿಡಿಯೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ..