UDUPI : ರೈಲು ಢಿಕ್ಕಿ ಹೊಡೆದು ಮೀನುಗಾರ ಮೃತ್ಯು
Tuesday, August 9, 2022
ಉಡುಪಿಯ ಮಲ್ಪೆಯಲ್ಲಿ ಮೀನುಗಾರಿಕೆ ವೃತ್ತಿ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಇಂದ್ರಾಳಿಯಲ್ಲಿ ರೈಲು ಢಿಕ್ಕಿ ಹೊಡೆದು ಸಾವನ್ಪಿದ ಘಟನೆ ನಡೆದಿದೆ. ಬ್ರಹ್ಮಾವರದ ಸುರೇಶ್(43) ಮೃತ ಮೀನುಗಾರ. ಸುರೇಶ್ ಅವರು ಆಗಸ್ಟ್ 4ರಂದು ಕೆಲಸಕ್ಕೆಂದು ಮಲ್ಪೆಗೆ ಹೋಗಿದ್ದು, ಆ. 7ರಂದು ಮನೆಗೆ ಕರೆ ಮಾಡಿ ಮಾತನಾಡಿದ್ದರು ಎನ್ನಲಾಗಿದೆ.
ಇಂದ್ರಾಳಿ ರೈಲು ಹಳಿಯ ಬಳಿ ಗಾಯಗೊಂಡು ಬಿದ್ದಿರುವ ಬಗ್ಗೆ ರೈಲ್ವೇ ಅಧಿಕಾರಿಗಳಿಂದ ಮಾಹಿತಿ ತಿಳಿದು ಪತ್ನಿ ಹಾಗೂ ಮನೆಯವರು ಸ್ಥಳಕ್ಕೆ ಹೋಗಿ ನೋಡಿದಾಗ ಸುರೇಶ ಮೃತಪಟ್ಟಿದ್ದರು. ಮಂಗಳೂರು-ಕುಂದಾಪುರ ರೈಲು ಹಳಿಯಲ್ಲಿ ನಡೆದುಕೊಂಡು ಯಾವುದೋ ರೈಲು ಢಿಕ್ಕಿಯಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.