UDUPI : ನೀರಿನಲ್ಲಿ ಕೊಚ್ಚಿಹೋದ ಸನ್ನಿಧಿಗಾಗಿ ಮುಂದುವರಿದ ಶೋಧ
Tuesday, August 9, 2022
ಸೋಮವಾರ ಸಂಜೆ ಶಾಲೆಯಿಂದ ಮನೆಗೆ ವಾಪಾಸ್ಸಾಗುವಾಗ ಕಾಲು ಸಂಕದಿಂದ ಕಾಲು ಜಾರಿಬಿದ್ದ, ಉಡುಪಿ ಜಿಲ್ಲೆ ಬೈಂದೂರು ಬೀಜಮಕ್ಕಿಯ ಬಾಲಕಿ ಸನ್ನಿಧಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಗ್ರಾಮದ ಚಪ್ಪರಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿನಿ ಸನ್ನಿಧಿ, ಮಂಗಳವಾರ ರಾತ್ರಿವರೆಗೂ ಪತ್ತೆಯಾಗಿಲ್ಲ. ಅಗ್ನಿಶಾಮಕ ದಳ, ಪೊಲೀಸರು, ಸ್ಥಳೀಯರು, ಈಜುಪಟುಗಳು ಹಾಗೂ ಮುಳುಗು ತಜ್ಞರು ರಾತ್ರಿ ವೇಳೆ ಆದರಿಂದ ಶೋಭಾ ಕಾರ್ಯ ಸದ್ಯಕ್ಕೆ ಸ್ಥಗಿತಗೊಳಿಸಿ, ನಾಳೆ ಮತ್ತೆ ಹುಡುಕಾಟ ಮುಂದುವರಿಸಲಿದ್ದಾರೆ. ನಾಳೆ ಸನ್ನಿಧಿ ಮನೆಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.