UDUPI : ಮುರಿಯ ಮೀನಿಗಾಗಿ ಮುಗಿ ಬಿದ್ದ ಮತ್ಸ್ಯ ಪ್ರೀಯರು
Tuesday, August 9, 2022
ಉಡುಪಿ ಜಿಲ್ಲೆಯ ಬೈಂದೂರಿನ ಕಡಲ ತೀರದಲ್ಲಿ ಮುರಿಯ ಮೀನಿಗಾಗಿ ಮತ್ಸ್ಯ ಪ್ರೀಯರು ಮುಗಿಬಿದ್ದಿರು ದೃಶ್ಯ ಕಂಡು ಬಂದಿದೆ. ಸದ್ಯ ಕರಾವಳಿಯಲ್ಲಿ ಭಾರಿ ಗಾಳಿ ಮಳೆಯಿಂದ ಕಡಲು ಪ್ರಕ್ಷುಬ್ಧಗೊಂಡು, ಬೃಹತ್ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದೆ.
ಅಲೆಗಳ ಜೊತೆಗೆ ಮುರಿಯ ಎನ್ನುವ ಮೀನುಗಳು ದಡಕ್ಕೆ ಬಂದು ಬೀಳುತ್ತಿದ್ದು, ಮೀನುಗಳನ್ನು ಸಂಗ್ರಹಿಸಲು ಮಕ್ಕಳು ಮಹಿಳೆಯರು ಎನ್ನದೇ ಎಲ್ಲರೂ ಕಡಲ ಕಿನಾರೆಯಲ್ಲಿ ಮುಗಿ ಬೀಳುತ್ತಿದ್ದಾರೆ. ಸದ್ಯ ನದಿ ನೀರುಗಳು ಹೆಚ್ಚಿನ ಪ್ರಮಾಣದಲ್ಲಿ ಸಮುದ್ರ ಸೇರುತ್ತಿದ್ದು, ಇದರ ಪರಿಣಾಮವಾಗಿ ಮುರಿಯ ಮೀನುಗಳು ದಡಕ್ಕೆ ಬಂದು ಬೀಳುತ್ತದೆ ಅನ್ನೋದು ಮೀನು ಸಂಗ್ರಹಕ್ಕೆ ಬಂದ ಕೆಲವರ ಮಾತು. ಮುರಿಯ ಸಿಕ್ಕಿದವರಿಗಂದು ಮನೆಯಲ್ಲಿ ಭರ್ಜರಿ ಮೀನೂಟ...