UDUPI : ನೀರುಪಾಲಗಿದ್ದ ಸನ್ನಿಧಿ ಮೃತದೇಹ ಪತ್ತೆ
Wednesday, August 10, 2022
ಸೋಮವಾರ ಸಂಜೆ ಕಾಲುಸಂಕ ದಾಟುತ್ತಿದ್ದ ವೇಳೆ ಕಾಲು ಜಾರಿಬಿದ್ದು ನೀರುಪಾಲಾಗಿದ್ದ ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಬಾಲಕಿ ಸನ್ನಿಧಿಯ ಮೃತದೇಹ ಪತ್ತೆಯಾಗಿದೆ. ಚಪ್ಪರಿಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2ನೇ ತರಗತಿ ವಿದ್ಯಾರ್ಥಿನಿ ಸನ್ನಿಧಿ (7) ಶೋಭಾ ಕಾರ್ಯ ಮೂರುದಿನಗಳ ಕಾಲ ನಡೆದಿತ್ತು.
ಸನ್ನಿಧಿಯ ಮೃತದೇಹ ಕಾಲುಸಂಕದಿಂದ 500 ಮೀಟರ್ ದೂರದಲ್ಲಿ ಪತ್ತೆಯಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿಗಳು, ಈಜುಪಟುಗಳಾದ ಮೀನುಗಾರ ನರೇಶ್ ಕೊಡೇರಿಯವರ ಮುಂದಾಳತ್ವದ 22 ಜನರ ತಂಡ, ಸಾರ್ವಜನಿಕರೂ ಸೇರಿದಂತೆ ಊರವರು ಶೋಧ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.